ಹಾಸನ:ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಉಚಿತ ಲ್ಯಾಪ್ ಟಾಪ್ ಹಂಚಿಕೆ ವೇಳೆ ಸಾಮಾಜಿಕ ಅಂತರ ಮರೆತು ವಿದ್ಯಾರ್ಥಿಗಳು ಮುನ್ನುಗ್ಗಿದ ಘಟನೆ ನಡೆಯಿತು.
ಹಾಸನದಲ್ಲಿ ಉಚಿತ ಲ್ಯಾಪ್ ಟಾಪ್ ವಿತರಣೆ ವೇಳೆ ನೂಕು ನುಗ್ಗಲು
ಸರ್ಕಾರದಿಂದ ನೀಡಲಾಗುವ ಉಚಿತ ಲ್ಯಾಪ್‌ಟಾಪ್ ಪಡೆಯಲು ಬಂದ ವಿದ್ಯಾರ್ಥಿಗಳು ನಾ ಮುಂದು ತಾ ಮುಂದು ಎಂದು ನುಗ್ಗಿದ ಪರಿಣಾಮ, ನೂಕು ನುಗ್ಗಲು ಉಂಟಾಯಿತು.
ಲ್ಯಾಪ್ ಟಾಪ್ ವಿತರಣೆ ವೇಳೆ ನೂಕು ನುಗ್ಗಲು
ಲ್ಯಾಪ್ ಟಾಪ್ ವಿತರಕರು ಸರಿಯಾದ ವ್ಯವಸ್ಥೆ ಮಾಡದಿರುವುದೇ ನೂಕು ನುಗ್ಗಲಿಗೆ ಕಾರಣವಾಗಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೆ ಲ್ಯಾಪ್ ಟಾಪ್ ವಿತರಿಸದಂತೆ ಸೂಚಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದರು.
ಸರ್ಕಾರ ಮುಂದಿನ ತಿಂಗಳಿನಿಂದ ಪದವಿ ಕಾಲೇಜುಗಳ ತರಗತಿ ಆರಂಭಿಸಲು ಯೋಚಿಸಿದೆ. ಆದರೆ, ಲ್ಯಾಪ್ ಟಾಪ್ ವಿತರಣೆಯಂತಹ ಸಣ್ಣ ಕಾರ್ಯಕ್ರಮದಲ್ಲೇ ಈ ರೀತಿ ಬೇಜವ್ದಾರಿತನ ತೋರಿಸಿದರೆ, ಇನ್ನು ತರಗತಿಗಳು ಪ್ರಾರಂಭವಾದರೆ ಹೇಗೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.