ಹಾಸನ: ದೊಡ್ಡ ದೊಡ್ಡ ಅಣೆಕಟ್ಟೆಗೆ ಭದ್ರ ಬುನಾದಿ ಹಾಕಿ ನೀರಿಗೆ ಅನುಕೂಲ ಮಾಡಿಕೊಟ್ಟವರು ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ಎಂಜಿನಿಯರ್ ಕೃಷ್ಣೇಗೌಡ ತಿಳಿಸಿದರು.
ವಿಶ್ವೇಶ್ವರಯ್ಯನವರ ಯೋಜನೆಗಳು ದೇಶದಲ್ಲಿ ಚಿರವಾಗಿದೆ : ಕೃಷ್ಣೇಗೌಡ
ಹಾಸನದ ಎಂ.ಜಿ. ರಸ್ತೆ ಬಳಿ ಇರುವ ಇಂಜಿನಿಯರ್ ಭವನದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ದಿನಾಚರಣೆ ಆಚರಿಸಲಾಯಿತು.
ನಗರದ ಎಂ.ಜಿ. ರಸ್ತೆ ಬಳಿ ಇರುವ ಇಂಜಿನಿಯರ್ ಭವನದಲ್ಲಿ ನಡೆದ ಸರ್.ಎಂ. ವಿಶ್ವೇಶ್ವರಯ್ಯ ದಿನಾಚರಣೆಯನ್ನು ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಬಳಿಕ ರಸ್ತೆ ಡಿವೈಡರ್ ಮಧ್ಯೆ ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣೇಗೌಡ , ಸರ್.ಎಂ. ವಿಶ್ವೇಶ್ವರಯ್ಯ ಅಂದು ಕೆ.ಆರ್.ಎಸ್. ನಿರ್ಮಿಸುವುದರ ಮೂಲಕ ಇಂದು ಕುಡಿಯುವ ನೀರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳು ಮೈಲುಗಲ್ಲುಗಳಿದ್ದಂತೆ. ಕೇವಲ ತಾಂತ್ರಿಕ ಕ್ಷೇತ್ರವಲ್ಲದೆ ಸಾಮಾಜಿಕ, ಶೈಕ್ಷಣಿಕ, ಕೃಷಿ, ನೀರಾವರಿ ಕ್ಷೇತ್ರದಲ್ಲೂ ಪರಿಣಾಮಕಾರಿ ಕೆಲಸ ಮಾಡಿದ್ದಾರೆ. ಇವರ ನೂರಾರು ಯೋಜನೆಗಳು ಭಾತರತದಲ್ಲಿ ಚಿರವಾಗಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿ ಚಿಕ್ಕೇಗೌಡ, ಕಾರ್ಯಪಾಲಕ ಇಂಜಿನಿಯರ್ ತಿಮ್ಮೇಗೌಡ, ಮಂಜನಾಥ್, ಜಿಪಂ ಎಂಜಿನಿಯರ್ ಆನಂದ್ ಇತರರು ಪಾಲ್ಗೊಂಡಿದ್ದರು.