ಕರ್ನಾಟಕ

karnataka

By

Published : Apr 17, 2022, 9:30 PM IST

ETV Bharat / state

ದುರಾಡಳಿತವನ್ನು ಮುಚ್ಚಿಹಾಕಲು ಬಿಜೆಪಿ ಕೋಮುವಾದ ಸೃಷ್ಟಿಸುತ್ತಿದೆ: ಸಿದ್ದರಾಮಯ್ಯ

ಬಿಜೆಪಿ ಪಕ್ಷದವರು ದುರಾಡಳಿತ ಮುಚ್ಚಿಹಾಕಲು ಕೋಮುವಾದವನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಹಾಸನ: ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ದುರಾಡಳಿತವನ್ನು ಮುಚ್ಚಿಹಾಕಲು ಬಿಜೆಪಿ ಪಕ್ಷದವರು ಕೋಮುವಾದವನ್ನು ಸೃಷ್ಟಿಸುತ್ತಿದ್ದಾರೆ. ಮೊದಲು ಬಿಜೆಪಿ ಪಕ್ಷವನ್ನು ಕಿತ್ತು ಹಾಕಿ ಎಂದು ಪ್ರಧಾನಿ ವಿರುದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.


ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಹಾಸನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಧರಣಿ ನಡೆಸಲಾಯಿತು. ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು. ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಮಂತ್ರಿ ಮತ್ತೊಬ್ಬರಿಲ್ಲ. ಇಡೀ ದೇಶದ ಇತಿಹಾಸದಲ್ಲಿ ಮೋದಿಯಂತಹ ದುರಾಡಳಿತವನ್ನು ನಾನು ಕಂಡಿಲ್ಲ ಎಂದರು.

ಈಶ್ವರಪ್ಪ ಅವರನ್ನು ಬಂಧಿಸಿ ಎಂದು ಹೋರಾಟ ಮಾಡುವಾಗ, ಕುಮಾರಸ್ವಾಮಿ ಈಶ್ವರಪ್ಪನವರನ್ನು ಏಕೆ ಬಂಧಿಸಬೇಕು ಎಂದು ಕೇಳ್ತಾರೆ. ಇವರನ್ನು ಬಿಜೆಪಿಯ ಬಿ ಟೀಂ ಎನ್ನದೆ ಇನ್ನೇನಂತ ಹೇಳಬೇಕು ಎಂದು ಜೆಡಿಎಸ್ ವಿರುದ್ದವೂ ಹರಿಹಾಯ್ದರು.

ಮೈತ್ರಿ ಸರ್ಕಾರ ಸಿದ್ದರಾಮಯ್ಯರಿಂದ ಹೋಯ್ತು ಎನ್ನುತ್ತಾರೆ. 80 ಸ್ಥಾನ ಗೆದ್ದ ನಾವು 37 ಸ್ಥಾನ ಗೆದ್ದ ಜೆಡಿಎಸ್‌ಗೆ ಅಧಿಕಾರ ನೀಡಿದ್ದೆವು. ಸಿಎಂ ಆದ ನಂತರ ತಾಜ್‌ವೆಸ್ಟೆಂಡ್ ಹೋಟೆಲ್ ಸೇರಿದರು. ಕೊಟ್ಟ ಕುದುರೆ ಏರದವ ಧೀರನೂ ಅಲ್ಲ ಶೂರನೂ ಅಲ್ಲ ಎಂದು ವಾಗ್ದಾಳಿ ನಡೆಸಿದ ಕುಮಾರಸ್ವಾಮಿಯವರು ನಾವು ಮೇಕೆದಾಟು ಮಾಡಿದ್ವಲ್ಲಾ, ಅದಕ್ಕೆ ಜನತಾ ಜಲಧಾರೆ ಮಾಡ್ತಿದ್ದಾರೆ. ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ ಎಂದರು.

ಇದನ್ನೂ ಓದಿ:ಜೆಡಿಎಸ್ ಹಳೆಯ ಪಕ್ಷ, ಮುಂದಿನ ಬಾರಿ ನಮ್ದೇ ಸರ್ಕಾರ, ಹೆಚ್‌ಡಿಕೆನೇ ಸಿಎಂ.. ಇಬ್ರಾಹಿಂ

For All Latest Updates

TAGGED:

ABOUT THE AUTHOR

...view details