ಅರಕಲಗೂಡು (ಹಾಸನ): ಜಿಲ್ಲೆಗೆ ಕೊರೊನಾ ಮಹಾಮಾರಿ ಕಾಡುತ್ತಿದ್ದರೂ ಇದನ್ನು ಲೆಕ್ಕಿಸದ ಜನ, ತಾಲೂಕಿನ ಕೇರಳಾಪುರದಲ್ಲಿ ಎಗ್ಗಿಲ್ಲದೆ ವಹಿವಾಟು ನಡೆಸುತ್ತಿದ್ದಾರೆ.
ಲಾಕ್ಡೌನ್ ನಿಯಮಗಳಿಗೆ ಡೋಂಟ್ ಕೇರ್ : ರಾತ್ರಿ 8 ಗಂಟೆಯಾದರೂ ಎಗ್ಗಿಲ್ಲದೆ ನಡೆಯುತ್ತಿದೆ ವಹಿವಾಟು - hassan news
ಹಾಸನದ ಅರಕಲಗೂಡಿನಲ್ಲಿ ರಾತ್ರಿ 8 ಗಂಟೆಯಾದರು ಎಲ್ಲ ಅಂಗಡಿಗಳು ತೆರೆದಿರುತ್ತವೆ. ಈ ಮೂಲಕ ಲಾಕ್ಡೌನ್ ಉಲ್ಲಂಘನೆ ಆಗುತ್ತಿದೆ.
ರಾತ್ರಿ 8 ಆದರೂ ಅಂಗಡಿಗಳು ಓಪನ್
ಕಟ್ಟಿಂಗ್ ಶಾಪ್, ಬೇಕರಿ, ಕೋಳಿ ಅಂಗಡಿ, ದಿನಸಿ ಅಂಗಡಿ, ಆಟೋಮೊಬೈಲ್ ಅಂಗಡಿ ಹಾಗೂ ಹೋಟೆಲ್ ಮಾಲೀಕರು ರಾತ್ರಿ 8 ಗಂಟೆಯಾದರೂ ಬಾಗಿಲು ತೆರೆದು ಯಾರ ಮಾತಿಗೂ ಅಂಜದೆ ವ್ಯಾಪಾರ ಮಾಡುತ್ತಿದ್ದಾರೆ.
ಸ್ವಯಂ ಪ್ರೇರಿತರಾಗಿ ಜಾಗೃತರಾಗದ ಕೆಲವರಿಂದ ಜನಸಮುದಾಯದಲ್ಲಿ ಆತಂಕ ಹೆಚ್ಚಿದೆ. ಸಂಬಂಧಪಟ್ಟವರು ಎಚ್ಚೆತ್ತು ಇತ್ತ ಗಮನ ಹರಿಸದಿದ್ದರೆ, ಸೋಂಕು ಹರಡುವಿಕೆ ತಡೆಗಟ್ಟುವುದು ಕಷ್ಟದ ಕೆಲಸವಾಗಲಿದೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.