ಹಾಸನ:ಸುರಕ್ಷಿತವಲ್ಲದ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುತ್ತಿದ್ದ ಸವಾರರಿಗೆ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸಿದರಲ್ಲದೆ, ನಗರದಲ್ಲಿ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದು ಸ್ಥಳದಲ್ಲೇ ಒಡೆದು ಹಾಕಿದರು.
ಹಾಸನದಲ್ಲಿ ಬೈಕ್ ಸವಾರರಿಗೆ ಶಾಕ್ ಕೊಟ್ಟ ಟ್ರಾಫಿಕ್ ಪೊಲೀಸರು! - ಹಾಸನ ಹೆಲ್ಮೆಟ್ ವಶ ಸುದ್ದಿ
ಸುರಕ್ಷಿತವಲ್ಲದ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುತ್ತಿದ್ದ ಸವಾರರಿಗೆ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸಿದರಲ್ಲದೆ, ನಗರದಲ್ಲಿ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದು ಸ್ಥಳದಲ್ಲೇ ಒಡೆದು ಹಾಕಿದರು.
![ಹಾಸನದಲ್ಲಿ ಬೈಕ್ ಸವಾರರಿಗೆ ಶಾಕ್ ಕೊಟ್ಟ ಟ್ರಾಫಿಕ್ ಪೊಲೀಸರು!](https://etvbharatimages.akamaized.net/etvbharat/prod-images/768-512-5010854-thumbnail-3x2-vid.jpg)
ಮಹಾವೀರ ಹಾಗೂ ಸಹ್ಯಾದ್ರಿ ವೃತ್ತದಿಂದ ಬಂದ ಬೈಕ್ ಸವಾರರು ಕನ್ನಡ ಸಾಹಿತ್ಯ ಪರಿಷತ್ ಬಳಿ ಇದ್ದ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದು ಪೀಕಲಾಟ ಅನುಭವಿಸಬೇಕಾಯಿತು. ಮುಖ ಪೂರ್ಣ ಮುಚ್ಚದ ಕೇವಲ ತಲೆಗೆ ಮಾತ್ರ ರಕ್ಷಣೆ ನೀಡುವ ಹೆಲ್ಮೆಟ್ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಆದರೂ ನಗರದಲ್ಲಿ ಟೋಪಿಯಾಕಾರದ ಹೆಲ್ಮೆಟ್‌ಗಳು ಚಾಲ್ತಿಯಲ್ಲಿವೆ. ಹೀಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದರು.
ಬೈಕ್‌ಗಳನ್ನು ಅಡ್ಡಗಟ್ಟಿ ನಿಲ್ಲಿಸುತ್ತಿದ್ದ ಪೊಲೀಸರು, ಹೆಲೈಟ್ ಕೊಡ್ತಿರೋ, ದಂಡ ಕಟ್ಟುತ್ತೀರೋ ಎಂದು ಕೇಳುತ್ತಿದ್ದರು. ಪೊಲೀಸರ ಬಲೆಗೆ ಸಿಕ್ಕ ಯುವಕನೊಬ್ಬ ಮರು ಮಾತನಾಡದೆ ಬೈಕ್‌ನಿಂದ ಕೆಳಗಿಳಿದು ಹೆಲ್ಮೆಟ್‌ನ್ನು ಒಡೆದು ಹಾಕಿದ.ಇನ್ನು ರಾಶಿಗಟ್ಟಲೇ ಬಿದ್ದಿದ್ದ ಹೆಲೈಟ್‌ಗಳನ್ನು ತೆಗೆದುಕೊಳ್ಳಲು ಸಾರ್ವಜನಿಕರು ಮುಗಿಬಿದ್ದರು.