ಕರ್ನಾಟಕ

karnataka

ETV Bharat / state

ವೇದಿಕೆಯಲ್ಲೇ ರೈತರ ವಿರುದ್ಧ ಗರಂ ಆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ - ಫಸಲ್ ಭೀಮಾ ಯೋಜನೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಫಸಲ್ ಬಿಮಾ ಯೋಜನೆ ನನ್ನ ಪಾಲಿಸಿ ನನ್ನ ಕೈಯಲ್ಲಿ ಎಂಬ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡುತ್ತಿರುವಾಗ ರೈತರು ನಮ್ಮ ಹಾಸನಕ್ಕೆ ಎಷ್ಟು ಕೊಟ್ಟಿದ್ದೀರಿ ಲೆಕ್ಕ ಹೇಳಿ ಎಂದಾಗ ಕೋಪಿಸಿಕೊಂಡು, ನೀವು ಕಾರ್ಯಕ್ರಮ ಹಾಳು ಮಾಡಲು ಬಂದಿದ್ದರೆ ನಾನು ಹೋಗುತ್ತೇನೆ ಎಂದರು.

Shobha Karandlaje, angry at the farmers on stage
ವೇದಿಕೆಯಲ್ಲೇ ರೈತರ ವಿರುದ್ಧ ಗರಂ ಆದ ಶೋಭಾ ಕರಂದ್ಲಾಜೆ

By

Published : Mar 13, 2022, 10:51 PM IST

ಹಾಸನ: ಕಾರ್ಯಕ್ರಮ ಹಾಳು ಮಾಡುವುದಕ್ಕೆ ಬಂದಿದ್ದರೆ ನಾನೇನು ಮಾಡುವುದಕ್ಕೆ ಆಗುವುದಿಲ್ಲ ನೀವೇ ಮಾತನಾಡಿಕೊಳ್ಳಿ ನಾನು ವೇದಿಕೆಯಿಂದ ಹೋಗುತ್ತೇನೆ ಹೀಗೆ ಮಾತನಾಡಿದ್ದು ಬೇರೆ ಯಾರೂ ಅಲ್ಲ ಎಂದು ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗರಂ ಆದರು.

ವೇದಿಕೆಯಲ್ಲೇ ರೈತರ ವಿರುದ್ಧ ಗರಂ ಆದ ಶೋಭಾ ಕರಂದ್ಲಾಜೆ

ಹಾಸನ ಜಿಲ್ಲೆಯ ಶಾಂತಿಗ್ರಾಮ ಸಮೀಪದ ಕಾರೆಕೆರೆಯ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಫಸಲ್ ಬಿಮಾ ಯೋಜನೆ ನನ್ನ ಪಾಲಿಸಿ ನನ್ನ ಕೈಯಲ್ಲಿ ಎಂಬ ಕಾರ್ಯಕ್ರಮದಲ್ಲಿ ಶೋಭಾ ಕರಂದ್ಲಾಜೆಗೆ ಫಸಲ್ ಬಿಮಾ ಯೋಜನೆಯ ಬಗ್ಗೆ ಮಾತನಾಡುವಾಗ ರೈತರು ಮಧ್ಯದಲ್ಲಿ ಪ್ರಶ್ನೆ ಕೇಳಿದಾಗ ಕೋಪಗೊಂಡು, ನೀವು ಕಾರ್ಯಕ್ರಮ ಹಾಳು ಮಾಡಲು ಬಂದಿದ್ದರೆ ನಾನು ಹೋಗುತ್ತೇನೆ ಎಂದರು.

ಹಾಸನ ರೈತರಿಗೆ ಫಸಲ್ ಬಿಮಾ ಯೋಜನೆ ಹಣ ಸಿಕ್ಕಿಲ್ಲ. ಹಾಸನ ಜಿಲ್ಲೆಯಿಂದ ಎಷ್ಟು ಹಣ ಸಂಗ್ರಹ ಮಾಡಿದ್ರು? ನಮ್ಮ ಜಿಲ್ಲೆಗೆ ಎಷ್ಟು ಕೋಟಿ ಹಣ ಬಂತು ಎಂದು ಹೇಳಿ ಎಂದು ವೇದಿಕೆ ಮೇಲೆ ಸಚಿವರು ಮಾತಿಗೆ ನಿಂತಾಗ ಅಸಮಾಧಾನ ಹೊರಹಾಕಿದರು. ಅಲ್ಲದೆ ಮೊದಲು ಈ ಬಗ್ಗೆ ಉತ್ತರ ಕೊಡಿ ಎಂದು ಸಚಿವರ ಭಾಷಣದ ಮಧ್ಯೆ ರೈತರೊಬ್ಬರು ಏರು ಧ್ವನಿಯಲ್ಲಿ ಮಾತನಾಡಿದಾಗ, ಅದಕ್ಕೆ ಇನ್ನೂ ಹತ್ತಾರು ಮಂದಿ ರೈತರು ಧ್ವನಿಗೂಡಿಸಿ ಭಾಷಣದ ಮಧ್ಯೆ ಗೊಂದಲ ಸೃಷ್ಟಿಸಿದರು.

ನಾನು ಮಾತಾಡೋಕೆ ಬೇರೆ ಎಲ್ಲಾ ಕಡೆ ಸಿಗುತ್ತೇನೆ. ಕಾರ್ಯಕ್ರಮಕ್ಕೆ ಅಡ್ಡಿ ಮಾಡುವುದಿದ್ರೆ ನೀವೇ ಮಾತಾಡಿ ಎಂದು ವೇದಿಕೆ ಮೇಲೆಯೇ ಶೋಭಾ ಅಸಮಾಧಾನ ಹೊರಹಾಕಿದ್ದಾರೆ. ಕೊನೆಗೆ ಹಾಸನ ಪೊಲೀಸರು ರೈತರನ್ನು ಸಮಾಧಾನಪಡಿಸಿದ್ದಾರೆ.

ಇದನ್ನೂ ಓದಿ:ವೈದ್ಯ ದಂಪತಿ ತೆರಳುತ್ತಿದ್ದ ಕಾರು ಭೀಕರ ಅಪಘಾತ.. ತಾಯಿ-ಮಗಳು ಸಾವು, ತಂದೆ ಸ್ಥಿತಿ ಗಂಭೀರ

ABOUT THE AUTHOR

...view details