ಹಾಸನ:ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಉದ್ದೂರು ಹೊಸಳ್ಳಿಯಲ್ಲಿಜಮೀನಿಗೆ ಹೋಗುವಾಗ ಕೆರೆಯಲ್ಲಿ ಎತ್ತಿನ ಗಾಡಿ ಮುಳುಗಿ ಮೃತಪಟ್ಟವರ ಮನೆಗೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಎತ್ತಿನಗಾಡಿ ದುರಂತ: ಮೃತರ ಕುಟುಂಬಕ್ಕೆ ರೇವಣ್ಣ ಸಾಂತ್ವನ - ಕೆರೆಯಲ್ಲಿ ಮುಳುಗಿ ನಾಲ್ವರ ಸಾವು
ಎತ್ತಿನ ಗಾಡಿಯಲ್ಲಿ ಜಮೀನಿಗೆ ಹೋಗುವಾಗ ಕೆರೆಯಲ್ಲಿ ಎತ್ತಿನ ಗಾಡಿ ದುರಂತದಲ್ಲಿ ಮೃತರಪಟ್ಟವರ ಕುಟುಂಬಸ್ಥರಿಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಡಿ ರೇವಣ್ಣ ಸಾಂತ್ವನ ಹೇಳಿದರು.
ಮೃತರ ಕುಟುಂಬಕ್ಕೆ ರೇವಣ್ಣ ಸಾಂತ್ವಾನ
ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಉದ್ದೂರು ಹೊಸಳ್ಳಿಯಲ್ಲಿ ರಾಜೇಗೌಡ ಎತ್ತಿನ ಗಾಡಿಯಲ್ಲಿ ಜಮೀನಿಗೆ ತೆರಳುತ್ತಿದ್ದರು. ಈ ವೇಳೆ ಗುಂಡಿಬಿದ್ದ ಜಾಗದಲ್ಲಿ ನೀರು ತುಂಬಿದ್ದ ಕಾರಣ ಗಾಡಿ ಕೆರೆಯಲ್ಲಿ ಮುಳುಗಿದೆ. ಘಟನೆಯಲ್ಲಿ ರಾಜೇಗೌಡ ಆತನ ಪತ್ನಿ ಶಾರದಮ್ಮ ಮತ್ತು ಪಕ್ಕದ ಮನೆಯ ಹೆಣ್ಣು ಮಕ್ಕಳಾದ ರುಚಿತಾ ಹಾಗೂ ದೃತಿ ಸಾವಿಗೀಡಾಗಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಹೊಸಳ್ಳಿಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಗಳಂತೆ ಪರಿಹಾರ ಧನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.