ಕರ್ನಾಟಕ

karnataka

ETV Bharat / state

ಸರ್ಕಾರ ಎಸ್​ಡಿಪಿಐ ಸಂಘಟನೆ ನಿಷೇಧಿಸಲಿ: ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ

ಬೆಂಗಳೂರಿನ ಗಲಭೆ ಹಾಗೂ ಶಾಸಕರ ಮನೆ ಮೇಲಿನ ದಾಳಿ ಹಿಂದೆ ಎಸ್​ಡಿಪಿಐ ಸಂಘಟನೆ ಕೈವಾಡವಿದೆ ಎಂದು ಮೇಲ್ನೋಟಕ್ಕೆ ರುಜುವಾತಾಗಿದೆ. ಹಾಗಾಗಿ, ಕೂಡಲೇ ಸಂಘಟನೆಯನ್ನು ನಿಷೇಧಿಸಬೇಕು ಎಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Ban SDPI organisation
ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ

By

Published : Aug 19, 2020, 6:51 PM IST

ಹಾಸನ: ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯ ಗಲಭೆ ಹಿಂದೆ ಎಸ್​ಡಿಪಿಐ ಸಂಘಟನೆಯ ಕೈವಾಡ ಇರುವುದರಿಂದ ಕೂಡಲೇ ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಒತ್ತಾಯಿಸಿದರು.

ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ

ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಯ ಮೇಲೆ ಬೆಂಕಿ ಹಾಕಿದ ಘಟನೆಯನ್ನು ಖಂಡಿಸುತ್ತೇವೆ. ದಲಿತ ಶಾಸಕನ ಮನೆ ಮೇಲೆ ದಾಳಿ ಮಾಡಿರುವುದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಿಸುವುದಿಲ್ಲ. ಶಾಸಕರಿಗೆ ಇಂತಹ ಗತಿಯಾದರೆ ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನು? ಎಂದರು.

ಕಾನೂನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಅಥವಾ ಸಂಘಟನೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಬೆಂಗಳೂರಿನ ಎಸ್​ಡಿಪಿಐ ಸಂಘಟನೆ ಕಚೇರಿಯಲ್ಲಿ ಮಾರಕಾಸ್ತ್ರಗಳು ದೊರೆತಿರುವುದು ಈ ಕೃತ್ಯಕ್ಕೆ ಪೂರಕವಾಗಿದೆ. ಇದರಿಂದ ನೂರಾರು ಕೋಟಿ ರೂ ನಷ್ಟ ಉಂಟಾಗಿದೆ. ಇದರ ಸಂಪೂರ್ಣ ಖರ್ಚನ್ನು ಈ ಕೃತ್ಯದಲ್ಲಿ ಭಾಗಿಯಾದವರಿಂದ ವಸೂಲಿ ಮಾಡಬೇಕು ಎಂದರು.

ABOUT THE AUTHOR

...view details