ಹಾಸನ: ಕಡ್ಡಾಯ ಮತದಾನ, ಮಳೆಕೊಯ್ಲು, ಪೋಲಾಗುತ್ತಿರುವ ಆಹಾರ, ಅಂತರ್ಜಲ ಹೆಚ್ಚಳದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರದುರ್ಗದ ಹೊಳಲ್ಕೆರೆಯ ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ವಿದ್ಯಾರ್ಥಿಗಳಿಂದ ಭಾನುವಾರ 4 ದಿನಗಳ ಕಾಲ ಸೈಕಲ್ ಜಾಥಾಗೆ ಹಾಸನದಲ್ಲಿ ಚಾಲನೆ ನೀಡಲಾಯಿತು.
ಹಾಸನ ಜಿಲ್ಲಾಡಳಿತ, ಜಿಲ್ಲಾಪಂಚಾಯ್ತಿ ಮತ್ತು ಬೆಸ್ಟ್ ಗ್ರಾಮೀಣಾಭಿವೃದ್ದಿ ಸಂಸ್ಥೆ, ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಸನ, ಇವರ ಸಹಭಾಗಿತ್ವದಲ್ಲಿ ಚಿತ್ರದುರ್ಗದ ಹೊಳಲ್ಕೆರೆಯ ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ವಿದ್ಯಾರ್ಥಿಗಳು ಹಾಸನ ಜಿಲ್ಲಾದ್ಯಂತ 350 ಕಿಲೋ ಮೀಟರ್ ಗಳ ಸೈಕಲ್ ಜಾಥಾ ಮಾಡಲಿದ್ದಾರೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಮತ್ತು ಏಕಲವ್ಯ ರೋವರ್ ಮುಕ್ತ ದಳದ ಹದಿನೈದು ರೋವರ್ಸ್ ತಂಡ 26 ಜನವರಿ 31 ರವರೆಗೆ 6 ದಿನಗಳ ಕಾಲ ಪ್ರಯಾಣ ನಡೆಸಲಿದೆ. ಈ ತಂಡ ಹಾಸನದಿಂದ ಹೊರಟು, ಹೊಳೆನರಸೀಪುರ-ಅರಕಲಗೂಡು-ಚನ್ನರಾಯಪಟ್ಟಣ-ಅರಸೀಕೆರೆ-ಬೇಲೂರು-ಸಕಲೇಶಪುರದ ಮೂಲಕ ವಾಪಸ್ಸು ಹಾಸನಕ್ಕೆ ಆಗಮಿಸುವ ಮೂಲಕ ಜಾಥಾ ಮುಕ್ತಾಯಗೊಳ್ಳಲಿದೆ.