ಹಾಸನ: ಅರಕಲಗೂಡು ತಾಲ್ಲೂಕಿನ ಕೆ.ಹೆಚ್.ಕೊಪ್ಪಲು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆಗೆ ಗ್ರಾಮದ ಅಭ್ಯರ್ಥಿಯನ್ನು ಕೈಬಿಟ್ಟು ಬೇರೆ ಊರಿನ ‘ಅನರ್ಹ’ ಅಭ್ಯರ್ಥಿಯನ್ನು ನೇಮಿಸಲಾಗಿದೆ. ಈ ನೇಮಕಾತಿ ಕೈಬಿಟ್ಟು ಗ್ರಾಮದ ಅಭ್ಯರ್ಥಿ ನೇಮಕಾತಿಗೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಅಂಗನವಾಡಿ ಕಾರ್ಯಕರ್ತೆ ಹುದ್ದೆಯಲ್ಲಿ ಅಕ್ರಮ ಆರೋಪ, ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಅಕ್ಟೋಬರ್ 30, 2018ರಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿತ್ತು. ಗ್ರಾಮದ ನಿವಾಸಿ ವೀಣಾ.ಡಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಗ್ರಾಮದವರಲ್ಲದ ಮಲ್ಲಿಪಟ್ಟಣ ಹೋಬಳಿ ಬೀಜಘಟ್ಟ ಗ್ರಾಮದ ನಿವಾಸಿ ರಮ್ಯ ಎಂಬವರ ಅರ್ಜಿ ಪರಿಗಣಿಸಿ ನೇಮಕಾತಿ ಮಾಡಲಾಗಿದೆ.
ರಮ್ಯ ಎಂಬವರು ಅರ್ಜಿ ಸಲ್ಲಿಸುವಾಗ ಪಡಿತರ ಚೀಟಿ ಸಂಖ್ಯೆ ಎ.ಆರ್.ಕೆ.ಆರ್.00111619 ಆಗಿದ್ದು, ಆ ಪ್ರಕಾರ ಇವರ ವಾಸಸ್ಥಳ ಬೀಜಘಟ್ಟ ಗ್ರಾಮವಾಗಿದೆ. ಹಾಗಾಗಿ ಇವರು ಕೆ.ಎಚ್.ಕೊಪ್ಪಲು ಅಂಗನವಾಡಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿಲ್ಲ. ಮತ್ತೊಮ್ಮೆ ನಕಲಿ ದಾಖಲೆ ಸೃಷ್ಟಿಸಿ ವಾಸಸ್ಥಳವನ್ನು ಇಲಾಖೆಗೆ ನೀಡಿರುವುದಾಗಿ ಗ್ರಾಮಸ್ಥರು ದೂರಿದ್ದಾರೆ. ಆದ್ದರಿಂದ ಆಯ್ಕೆ ಸಮಿತಿ ರಮ್ಯ ಅವರನ್ನು ವಜಾ ಮಾಡಿ ಮೂಲ ನಿವಾಸಿ ಅಭ್ಯರ್ಥಿ ವೀಣಾ ಡಿ. ಅವರಿಗೆ ನೇಮಕಾತಿ ಪತ್ರ ಕೊಡಬೇಕು ಎಂದು ಆಗ್ರಹಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ಮೆಕ್ಕೆ ಜೋಳಕ್ಕೆ ವೈರಸ್ ಕಾಟ: ಬೆಳೆ ನಾಶ ಮಾಡುತ್ತಿರುವ ಸೈನಿಕ ಹುಳು
ರಮ್ಯ ನೇಮಕಾತಿಯಲ್ಲಿ ಅಂದು ಸಿ.ಡಿ.ಪಿ.ಓ ಆಗಿದ್ದ ಶಿವಕುಮಾರ ಮತ್ತು ಇನ್ನಿತರ ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸತ್ಯಶೋಧನಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ.