ಹಾಸನ: ಯಾವುದೇ ಕೆಲಸವಾಗಿರಲಿ ಅದು ಮೇಲು-ಕೀಳಲ್ಲ. ಪ್ರೀತಿಯಿಂದ ನಿರ್ವಹಿಸಬೇಕು. ಸರ್ಕಾರದಿಂದ ಸಮುದಾಯಗಳಿಗೆ ಸಿಗುವ ಸವಲತ್ತುಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ ನೀಡಿದರು.
ಸವಿತಾ ಸಮಾಜದವರು ಕೂದಲು ಕತ್ತರಿಸುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ: ಡಿಸಿ - ಹಾಸನ ಸುದ್ದಿ
ಸವಿತಾ ಸಮಾಜದವರು ಕೂದಲು ಕತ್ತರಿಸುವ ಕೆಲಸ ಮಾಡುವ ಮೂಲಕ ಒಂದು ರೀತಿ ಸಮಾಜ ಸೇವೆಯಂತಹ ಕೆಲಸವನ್ನು ಮಾಡುತ್ತಿದ್ದಾರೆ. ಅವರನ್ನು ಗೌರವದಿಂದ ಕಾಣಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾದಸ್ವರ, ಸ್ಯಾಕ್ಸೋಪೋನ್, ಡೋಲು ಬಾರಿಸುವವರು ಈ ಜನಾಂಗ ಬಿಟ್ಟರೇ ಬೇರೆ ಜನಾಂಗದಲ್ಲಿ ಸಿಗುವವರು ತೀರ ಕಡಿಮೆ ಎಂದು ಶ್ಲಾಘಿಸಿದರು.
ಸವಿತಾ ಸಮಾಜದವರು ಕೂದಲು ಕತ್ತರಿಸುವ ಕೆಲಸ ಮಾಡುವ ಮೂಲಕ ಒಂದು ರೀತಿ ಸಮಾಜ ಸೇವೆಯಂತಹ ಕೆಲಸವನ್ನು ಮಾಡುತ್ತಿದ್ದಾರೆ. ಅವರನ್ನು ಗೌರವದಿಂದ ಕಾಣಬೇಕು ಎಂದ ಅವರು, ಈ ಸಮುದಾಯದ ಅಭಿವೃದ್ಧಿಗಾಗಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ದೇವರಾಜ ಅರಸು ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿದೆ. ಸರ್ಕಾರ ಸುಮಾರು 208 ಸವಿತಾ ಸಮಾಜದವರಿಗೆ 71 ಲಕ್ಷ ರೂ.ಗಳ ಸಾಲವನ್ನು ನೀಡಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ 16 ಜನರಿಗೆ ಕೊಳವೆ ಬಾವಿ ಕೊರೆಯಲು ಸಹಾಯಸ್ತ ಕೊಟ್ಟಿದೆ. ಇನ್ನೂ ಕೂಡ ಹೆಚ್ಚು ಹೆಚ್ಚಾಗಿ ಸರ್ಕಾರದ ಯೋಜನೆಯನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.