ಅರಕಲಗೂಡು:ರಾಮನಾಥಪುರ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಮತ್ತು ಕನ್ನಡಿಗರನ್ನು ಕಡೆಗಣಿಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ರಾಮನಾಥಪುರ ಬಸವೇಶ್ವರ ವೃತ್ತದಲ್ಲಿ ಜಮಾಹಿಸಿದ ವಿವಿಧ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ಸೀಬಹಳ್ಳಿ ಯೋಗಣ್ಣ ಮಾತನಾಡಿ, ಸಂಗೊಳ್ಳಿ ರಾಯಣ್ಣ ನಂತರ ಸ್ವಾತಂತ್ರ‍್ಯ ಹೋರಾಟಗಾರ ಪ್ರತಿಮೆ ತೆರವುಗೊಳಿಸಿದ ಬೆಳಗಾವಿ ಅಡಳಿತವು ಕನ್ನಡಿಗರ ಕ್ಷಮೆ ಕೇಳಬೇಕು. ಕನ್ನಡ ನಾಡು, ನುಡಿ ಮತ್ತು ಕನ್ನಡಿಗರ ಅಸ್ತಿತ್ವಕ್ಕೆ ಅಗೌರವ ತರುವಂತಹ ಚಟುವಟಿಕೆಗಳು ಸಂಭವಿಸಿದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಳಿಕ ಕರವೇ. ಹೋಬಳಿ ಅಧ್ಯಕ್ಷ ಬಿ.ಎಂ. ಪುಟ್ಟರಾಜು ಮಾತನಾಡಿ, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ವಿರೋಧಿಸಿ ಪುಂಡಾಟಿಕೆ ನಡೆಸಿರುವ ಎಂಇಎಸ್ ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇಧಿಸಿಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಸ್ಲಿಂ ಸಮಾಜದ ಮುಖಂಡ ಸಾದಿಕ್ ಸಾಬ್ ,ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಸದಸ್ಯ ಮುಗಳೂರು ಕೃಷ್ಣಗೌಡ, ಕರವೇ. ಅಧ್ಯಕ್ಷ ಸೋಮು, ಕೃಷಿ ಸಹಕಾರ ಸಂಘದ ಸದಸ್ಯ ಸಾಬಾನು, ಅಂಬೇಡ್ಕರ್ ಸಂಘದ ಅಧ್ಯಕ್ಷ ವಿನೋಧ್ ಮುಂತಾದವರು ಭಾಗವಹಿಸಿದ್ದರು.