ಕರ್ನಾಟಕ

karnataka

ETV Bharat / state

ದುಬಾರಿ ದರಕ್ಕೆ ನಿವೇಶನ ಮಾರಾಟ ಮಾಡುವ ದಂಧೆ ನಡೆಯುತ್ತಿದೆ: ಹೆಚ್.ಡಿ. ರೇವಣ್ಣ - Former Minister HD.Revanna

ದುಬಾರಿ ದರಕ್ಕೆ ನಿವೇಶನಗಳನ್ನು ಮಾರಾಟ ಮಾಡುವ ದಂಧೆ ಹಾಸನದಲ್ಲಿ ನಡೆಯುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕಿಡಿ ಕಾರಿದರು.

HD. revanna
ಮಾಜಿ ಸಚಿವ ಹೆಚ್.ಡಿ. ರೇವಣ್ಣ

By

Published : Mar 22, 2020, 5:03 AM IST

ಹಾಸನ: ದುಬಾರಿ ದರಕ್ಕೆ ನಿವೇಶನಗಳನ್ನು ಮಾರಾಟ ಮಾಡುವ ದಂಧೆ ನಡೆಯುತ್ತಿದ್ದು, ಕೂಡಲೇ ಸರ್ಕಾರ ನಿವೇಶನಗಳನ್ನು ಮುಟ್ಟುಗೋಲು ಹಾಕಬೇಕು. ನಾನು ಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ಕೂಡಲೇ ಈ ದಂಧೆ ಜೋರಾಗಿಯೇ ನಡೆದಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕಿಡಿ ಕಾರಿದರು.

ಮಾಜಿ ಸಚಿವ ಹೆಚ್.ಡಿ. ರೇವಣ್ಣ

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜಿಲ್ಲೆಯ ಸುತ್ತಮುತ್ತಲ ಪ್ರದೇಶಗಳ ಗ್ರಾಮದ ಬಡವರ ಸುಮಾರು ಜಾಗಗಳ ಬಗ್ಗೆ ಗೃಹ ಸಚಿವರ ಮತ್ತು ನಗರಾಭಿವೃದ್ಧಿ ಸಚಿವರ ಗಮನಕ್ಕೂ ತರಲಾಗಿದೆ. ನಾನು ಬಸ್ ನಿಲ್ದಾಣದ ಎದುರೇ ಅಡಿಗೆ 500 ರೂ.ಗಳಿಗೆ ನಿವೇಶನ ಕೊಡಿಸುತ್ತೇನೆ. ಆದರೆ ಇಂದು ಜಿಲ್ಲೆಗೆ 8 ಕಿ.ಮಿ. ದೂರದಲ್ಲಿರುವ ನಿವೇಶನಕ್ಕೆ 900 ರೂ. ನಿಗದಿಪಡಿಸಿದ್ದಾರೆ. ಇದು ಒಂದು ದಂಧೆಯಾಗಿ ನಡೆಯುತ್ತಿದೆ ಎಂದರು.

ಈಗಾಗಲೇ ಆಸಕ್ತರಿಂದ ನಿವೇಶನಕ್ಕೆ ಅರ್ಜಿ ಕರೆದಿದ್ದು, ಪ್ರತಿನಿತ್ಯ ಸಾವಿರಾರು ಅರ್ಜಿಗಳು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಗರಸಭೆ ಹಾಗೂ ಪುರಸಭೆಗಳಿಗೆ ಸರಕಾರ ಕೂಡಲೇ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸಿದರು.

ಕೇರಳ ಮಾದರಿ ಕ್ರಮ: ಕೊರೊನಾ ವೈರಸ್ ನಿಯಂತ್ರಣಕ್ಕೆ ಸರ್ಕಾರವು ಮೀಸಲಿಟ್ಟಿರುವ ಹಣ ಕಡಿಮೆಯಾಗಿದ್ದು, ಕೇರಳ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೆಚ್.ಡಿ. ರೇವಣ್ಣ ಒತ್ತಾಯಿಸಿದರು. ಇತಿಹಾಸದಲ್ಲೇ ಕೊರೊನಾ ಖಾಯಿಲೆ ಬಗ್ಗೆ ಕೇಳಿರಲಿಲ್ಲ. ಮೊದಲು ಚೀನಾ ದೇಶಕ್ಕೆ ಬಂದು ಅಲ್ಲಿ ಈಗಾಗಲೇ ಸಾವಿರಾರು ಜನ ಕೊರೊನಾಗೆ ತುತ್ತಾಗಿದ್ದಾರೆ. ಅಮೆರಿಕದಲ್ಲೂ ಸಾವಿರಾರು ಜನರಿಗೆ ವೈರಸ್ ಹರಡಿದೆ. ಇನ್ನು ಇಟಲಿಯಲ್ಲಿ ಹೆಚ್ಚು ಇದ್ದು, ಈಗ ಭಾರತ ದೇಶದೆಲ್ಲಡೆ ಹರಡಿದೆ. ಈ ಬಗ್ಗೆ ಸರ್ಕಾರವು ಹಲವಾರು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಆದರೆ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರಕಾರ ಮೀಸಲಿಟ್ಟ 200 ಕೋಟಿ ರೂ. ಸಾಕಾಗುವುದಿಲ್ಲ. ಕೇರಳದಲ್ಲಿ ಯಾವ ಕ್ರಮ ಕೈಗೊಂಡಿದ್ದಾರೋ ಅದೇ ರೀತಿಯಲ್ಲಿ ಇಲ್ಲೂ ಕೂಡ ಅನುಸರಿಸುವುದು ಉತ್ತಮ ಎಂದು ಸಲಹೆ ನೀಡಿದರು.

ಇನ್ನು ಜನತಾ ಕರ್ಫ್ಯೂ ಒಳ್ಳೆಯದೇ ಆದರೆ ಮೊದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿತ್ತು. ನಿತ್ಯವೂ ಕೂಲಿ ಮಾಡಿದರೆ ಬದುಕು ಎನ್ನುವವರ ಬಗ್ಗೆಯೂ ಯೋಚನೆ ಮಾಡುವಂತೆ ಸಲಹೆ ಕೊಟ್ಟರು.

ABOUT THE AUTHOR

...view details