ಸಕಲೇಶಪುರ: ಒಂದೇ ಬಡಾವಣೆಯ ಒಂದು ಕಡೆ ಮಾತ್ರ ಕಾಂಕ್ರೀಟ್ ರಸ್ತೆ ಮಂಜೂರಾಗಿರುವುದನ್ನು ವಿರೋಧಿಸಿ ಕೆಲವರು ಕಾಮಗಾರಿಯ ಪ್ರಾರಂಭಕ್ಕೆ ವಿರೋಧ ವ್ಯಕ್ತಪಡಿಸಿರುವ ಘಟನೆ ಪಟ್ಟಣದ ಹೇಮಾವತಿ ನಗರ ಬಡಾವಣೆಯಲ್ಲಿ ನಡೆದಿದೆ.
ಬಡಾವಣೆಯ ಒಂದೆಡೆ ಮಾತ್ರ ಕಾಂಕ್ರೀಟ್ ರಸ್ತೆ ಮಂಜೂರು: ಕಾಮಗಾರಿ ಆರಂಭಕ್ಕೆ ಸ್ಥಳೀಯರ ವಿರೋಧ
ಪಟ್ಟಣದ ವಾರ್ಡ್ ನಂ.1 ಹೇಮಾವತಿ ನಗರ ಬಡಾವಣೆಯ ಮೊದಲ ತಿರುವಿನ ರಸ್ತೆಗೆ ಸುಮಾರು 10 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿಗೆ ಹಣ ಮಂಜೂರಾಗಿದೆ. ಮೊದಲ ತಿರುವಿನ ರಸ್ತೆಯನ್ನು ಮಾತ್ರ ಕಾಂಕ್ರೀಟ್ ಮಾಡುತ್ತಿರುವುದು ಖಂಡನೀಯ. ಮಾಡುವುದಾದರೆ ನಮ್ಮ ವಾರ್ಡ್ ರಸ್ತೆಯನ್ನೂ ಕಾಂಕ್ರೀಟ್ ಮಾಡಲಿ. ಇಲ್ಲದಿದ್ದಲ್ಲಿ ಎರಡೂ ಮಾಡುವುದು ಬೇಡ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ವಾರ್ಡ್ ನಂ.1 ಹೇಮಾವತಿ ನಗರ ಬಡಾವಣೆಯ ಮೊದಲ ತಿರುವಿನ ರಸ್ತೆಗೆ ಸುಮಾರು 10 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿಗೆ ಹಣ ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ಸ್ಥಳಕ್ಕೆ ಜೆಸಿಬಿ ತಂದಿದ್ದರು. ಈ ಸಂದರ್ಭದಲ್ಲಿ 4ನೇ ತಿರುವಿನಲ್ಲಿರುವ ಬಡಾವಣೆಯ ನಿವಾಸಿಗಳು ಜೆಸಿಬಿ ಕೆಲಸ ಮಾಡದಂತೆ ತಡೆಯೊಡ್ಡಿದ್ದಾರೆ. ಬಡಾವಣೆಯ ಹಲವು ರಸ್ತೆಗಳು ಅಭಿವೃದ್ಧಿಯಾಗಿದ್ದರೂ ಸಹ ನಮ್ಮ ವಾರ್ಡ್ ರಸ್ತೆ ಮಾತ್ರ ಆಗಿಲ್ಲ. ಇದೀಗ ಮೊದಲ ತಿರುವಿನ ರಸ್ತೆಯನ್ನು ಮಾತ್ರ ಕಾಂಕ್ರೀಟ್ ಮಾಡುತ್ತಿರುವುದು ಖಂಡನೀಯ. ಮಾಡುವುದಾದರೆ ನಮ್ಮ ವಾರ್ಡ್ ರಸ್ತೆಯನ್ನು ಕಾಂಕ್ರೀಟ್ ಮಾಡಲಿ. ಇಲ್ಲದಿದ್ದಲ್ಲಿ ಎರಡೂ ಮಾಡುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.