ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಹಸಿಡೆ ಗ್ರಾಮದಲ್ಲಿ ಕಾಡಾನೆ ತುಳಿತದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಜಿಲ್ಲಾಧಿಕಾರಿ ಕಚೇರಿ ಮುಂದಿಟ್ಟು ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಸಿಡೆ ಗ್ರಾಮದ ಕಾಫಿತೋಟದಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುವ ವೇಳೆ ವಸಂತ (55) ಕಾಡಾನೆ ತುಳಿತಕ್ಕೆ ಒಳಗಾಗಿ ಗಾಯಗೊಂಡಿದ್ದನು. ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿತ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಹಾಗೂ ರೈತರು ಜಿಲ್ಲಾಧಿಕಾರಿ ಕಚೇರಿಯೆದುರು ಆಲೂರು - ಸಕಲೇಶಪುರ ಶಾಸಕ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಮಾತನಾಡಿದರು ಸ್ಥಳಕ್ಕೆ ಅರಣ್ಯ ಸಚಿವರು ಬರಬೇಕು, ಕಾಡಾನೆಯಿಂದ ಗ್ರಾಮಸ್ಥರಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸೋವರೆಗೂ ಇಲ್ಲಿಂದ ಮೇಲೇಳೋದಿಲ್ಲ, ಅಂತ್ಯಸಂಸ್ಕಾರವನ್ನೂ ಮಾಡೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹತ್ತಾರು ದಶಕಗಳಿಂದ ಕಾಡಾನೆ ದಾಳಿ ಕುರಿತು ಸಾಕಷ್ಟು ಹೋರಾಟ ಮಾಡುತ್ತಿದ್ದರೂ, ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರವಾಗಲಿ ನಮ್ಮ ನೆರವಿಗೆ ಬಂದಿಲ್ಲ. ಇದೇ ಕಡೆಯ ಸಾವಾಗಬೇಕು. ನಮಗೆ ಶಾಶ್ವತ ಪರಿಹಾರ ಕೊಡಿ. ಇಲ್ಲ ದಯಾಮರಣ ಕೊಡಿ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಓದಿ:ಡ್ರಗ್ಸ್ ಸಾಗಣೆ ಆರೋಪ: ಮಂಗಳೂರು ರೌಡಿಶೀಟರ್ ಸೇರಿ ನಾಲ್ವರ ಬಂಧನ
ಈ ವೇಳೆ ಮಧ್ಯೆ ಪ್ರವೇಶಿಸಿದ ಜಿಲ್ಲಾಧಿಕಾರಿ ಆರ್. ಗಿರೀಶ್ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ್ರು, ಇದಕ್ಕೆ ಒಪ್ಪದ ಜನ, ಸ್ಥಳಕ್ಕೆ ಅರಣ್ಯ ಮಂತ್ರಿಗಳು ಬಂದು ಪರಿಹಾರ ತಿಳಿಸಬೇಕು, ಅಲ್ಲಿಯವರೆಗೂ ನಾವು ಅಂತ್ಯ ಸಂಸ್ಕಾರ ಮಾಡೋದಿಲ್ಲ ಅಂತಾ ಪಟ್ಟು ಹಿಡಿದ್ರು. ಆಗ ಸಕಲೇಶಪುರದಲ್ಲಿ ಫೆಬ್ರವರಿ 16 ಕ್ಕೆ ಅರಣ್ಯ ಸಚಿವರು ಹಾಗೂ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸುವ ತುರ್ತು ಪ್ರಕಟಣೆಯನ್ನು ಹೊರಡಿಸಿ, ಮತ್ತು ತಾತ್ಕಾಲಿಕವಾಗಿ 2 ಲಕ್ಷ ರೂ.ಚೆಕ್ ನೀಡಿ ಉಳಿದ 5.5.ಲಕ್ಷ ಹಣವನ್ನು ಬ್ಯಾಂಕ್ ಖಾತೆಗೆ ಹಾಕುವುದಾಗಿ ಡಿಎಫ್ಓ ಮತ್ತು ಜಿಲ್ಲಾಧಿಕಾರಿ ಹೇಳಿಕೆ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು.