ಕರ್ನಾಟಕ

karnataka

ETV Bharat / state

ಸಕಲೇಶಪುರ: ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೀಶ್ ನೇತೃತ್ವದಲ್ಲಿ ಕೆರೆ ಒತ್ತುವರಿ ತೆರವು - ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೀಶ್

ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿರುವ ಅತ್ತಿಕಟ್ಟೆ ಕೆರೆಯ ಜಾಗವನ್ನು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೀಶ್ ನೇತೃತ್ವದಲ್ಲಿ ಕೆರೆ ಒತ್ತುವರಿ ತೆರವು ಮಾಡಲಾಯಿತು.

Sakaleshpur Chief Executive Officer Harish led the clearing lake
ಸಕಲೇಶಪುರ: ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೀಶ್ ನೇತೃತ್ವದಲ್ಲಿ ಕೆರೆ ಒತ್ತುವರಿ ತೆರವು

By

Published : Jun 7, 2020, 12:54 AM IST

ಸಕಲೇಶಪುರ: ಕೆರೆಗಳನ್ನು ಸಂರಕ್ಷಣೆ ಮತ್ತು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಕೆರೆ ಜಾಗಗಳನ್ನು ಅತಿಕ್ರಮಣ ಮಾಡಿರುವುದನ್ನು ಗುರುತಿಸಿ ತೆರವು ಮಾಡಿಸಲಾಗುತ್ತದೆ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಜಿ.ಆರ್ ಹರೀಶ್ ಹೇಳಿದರು.

ಸಕಲೇಶಪುರ: ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೀಶ್ ನೇತೃತ್ವದಲ್ಲಿ ಕೆರೆ ಒತ್ತುವರಿ ತೆರವು

ತಾಲ್ಲೂಕಿನ ಬಾಳ್ಳುಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿರುವ ಅತ್ತಿಕಟ್ಟೆ ಕೆರೆಯ ಜಾಗವನ್ನು ಅತಿಕ್ರಮಣ ಮಾಡಿದ್ದನ್ನು ಗುರುತಿಸಿ ತೆರವುಗೊಳಿಸಿ. ನಂತರ ಮಾತನಾಡಿ ವಿಶ್ವಪರಿಸರ ದಿನದ ಅಂಗವಾಗಿ ತಾಲ್ಲೂಕಿನಲ್ಲಿ ಕೆರೆ ಜಾಗಗಳನ್ನು ಒತ್ತುವರಿ ಮಾಡಿರುವುದನ್ನು ಹೊಸದಾಗಿ ಸರ್ವೆ ಮಾಡಿಸಿ ಗುರುತಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಒಟ್ಟು 612 ಕೆರೆಗಳಿದ್ದು, ಇವುಗಳಲ್ಲಿ ಹಲವಾರು ಕೆರೆಗಳು ಒತ್ತುವರಿಯಾಗಿದೆ.

ಒತ್ತುವರಿ ಮಾಡಿರುವವರಿಗೆ ನೋಟಿಸ್ ನೀಡಿ ತೆರವುಕಾರ್ಯಚರಣೆ ಆರಂಭಿಸಲಾಗುತ್ತದೆ. 612 ಕೆರೆಗಳ ಸರ್ವೆ ಮಾಡಿಸಿಕೆರೆಯ ಗಡಿಯನ್ನು ಗುರುತಿಸಿದ ನಂತರ ಸುತ್ತಲು ಕಾಲುವೆತೋಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದರು. ಚಿಕ್ಕನಾಯಕನಹಳ್ಳಿಯ ಅತ್ತಿಕಟ್ಟೆ ಕೆರೆಯನ್ನು ನರೇಗಾ ಯೋಜನೆ ಅಡಿಯಲ್ಲಿ 5 ಲಕ್ಷದ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕೆರೆಯ ಒತ್ತುವರಿ ಜಾಗವನ್ನುತೆರವುಗೊಳಿಸಿ ಸುತ್ತಲು ಕಾಲುವೆಯನ್ನು ತೆಗೆದುಅದರ ಪಕ್ಕದಲ್ಲಿ ಗಿಡಗಳನ್ನು ನೆಡುವ ಕಾರ್ಯವನ್ನು ಗ್ರಾಮಪಂಚಾಯತಿ ಸಹಕಾರದಲ್ಲಿ ಮಾಡಲಾಗುತ್ತಿದೆ ಎಂದರು. ಸರ್ಕಾರಿ ಕೆರೆಗಳನ್ನುಅತಿಕ್ರಮಣ ಮಾಡಿರುವವರು ಸ್ವಯಂ ಪ್ರೇರಿತರಾಗಿ ಜಾಗವನ್ನುಬಿಟ್ಟುಕೊಡಬೇಕು ತಪ್ಪಿದ್ದಲ್ಲಿ ಭೂ ಕಬಳಿಕೆ ನಿಷೇದಕಾಯ್ದೆ 2011ರ ಅನ್ವಯ ಶಿಸ್ತುಕ್ರಮ ಜರುಗಿಸಲಾಗುವುದು.

ಒತ್ತುವರಿ ತೆರವು ಮಾಡದೆ ಲಾಬಿನಡೆಸಲು ಮುಂದಾದರೆ ಸರ್ಕಾರದ ವತಿಯಿಂದಲೇ ತೆರವುಗೊಳಿಸಬೇಕಾಗುತ್ತದೆಎಂದು ಎಚ್ಚರಿಕೆ ನೀಡಿದರು. ಒತ್ತುವರಿ ಮಾಡಿಕೊಂಡಿರುವವರಿಗೆ ನಿಯಮ 04ರ ಅಡಿನೋಟಿಸ್ ನೀಡಿರುತ್ತೇವೆ. ಅವರ ಬಳಿ ಸೂಕ್ತದಾಖಲಾತಿಗಳಿದ್ದರೆ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಸಲ್ಲಿಸಬಹುದು. ಒಂದು ವೇಳೆ ಯಾವುದೇದಾಖಲಾತಿಗಳು ಇಲ್ಲದಿದ್ದರೆ ಸರ್ವೇಯವರು ಗುರುತು ಮಾಡಿದ ಜಾಗವನ್ನುತೆರವುಗೊಳಿಸುತ್ತವೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ತಾಲ್ಲೂಕುಪಂಚಾಯಿತಿ ಸಹಾಯಕ ಅಭಿವೃದ್ಧಿ ಅಧಿಕಾರಿಅದಿತ್ಯ, ಸಾಮಾಜಿಕ ವಲಯ ಅರಣ್ಯಾಧಿಕಾರಿಗವಿಯಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷೆಶಿಲ್ಪಾ ಮಲ್ಲಿಕ್, ಉಪಾಧ್ಯಕ್ಷ ಸ್ವಾಮಿ , ಪಿಡಿಒ ಪ್ರಭಾ, ಕಾರ್ಯದರ್ಶಿಶೇಖರ್, ಗ್ರಾಪಂ ಸದಸ್ಯರಾದ ಪಾಲಾಕ್ಷ, ಲೊಕೇಶ್ ಇನ್ನು ಮುಂತಾದವರು ಇದ್ದರು.

For All Latest Updates

ABOUT THE AUTHOR

...view details