ಕರ್ನಾಟಕ

karnataka

ETV Bharat / state

ಸ್ವಂತ ಊರು ಇಲ್ಲ....ಕೆಲಸವೂ ಇಲ್ಲ: ಕೂಲಿ ಕಾರ್ಮಿಕರ ಪಾಡು ಕೇಳುವವರಿಲ್ಲ

ಸರ್ಕಾರ ರಾಜ್ಯದೊಳಗಡೆ ಇರುವ ಕೂಲಿ ಕಾರ್ಮಿಕರನ್ನು ವಿವಿಧ ಜಿಲ್ಲೆಗಳಿಗೆ ಕಳುಹಿಸಲು ಕೆಎಸ್ಆರ್​​​ಟಿಸಿ ಬಸ್ ವ್ಯವಸ್ಥೆ ಕಲ್ಪಿಸಿದೆ. ತಾಲೂಕು ಆಡಳಿತದ ಜೊತೆಗೆ ಶಾಸಕರು ಸಹ ಗಮನ ಹರಿಸಿ ಊರಿಗೆ ಹೋಗಲು ಇಚ್ಚಿಸುವ ಕೂಲಿ ಕಾರ್ಮಿಕರಿಗೆ ನೆರವಿನ ಹಸ್ತ ತೋರಬೇಕಾಗಿದೆ.

Sakaleshapura: Problem of wage labors
ಸ್ವಂತ ಊರು ಇಲ್ಲ....ಕೆಲಸವು ಇಲ್ಲ: ಕೂಲಿ ಕಾರ್ಮಿಕರ ಪಾಡು ಕೇಳುವವರಿಲ್ಲ

By

Published : Apr 26, 2020, 1:53 PM IST

ಸಕಲೇಶಪುರ:ಲಾಕ್​ಡೌನ್​​ ಹಿನ್ನೆಲೆ ಕೆಲಸವಿಲ್ಲದೇ, ಇತ್ತ ತಿನ್ನಲು ಅನ್ನವಿಲ್ಲದೇ ಕುಟುಂಬವೊಂದು ಕಷ್ಟಪಡುತ್ತಿದ್ದು, ಊರಿಗೆ ಕಳುಹಿಸಿಕೊಡಿ ಹೇಗೋ ಜೀವನ ನಡೆಸುತ್ತೇವೆ ಎಂದರೆ ಅನುಮತಿಯೂ ಸಿಕ್ಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮಲೆನಾಡಿನಲ್ಲಿ ಉತ್ತಮ ಕೂಲಿ ಕೆಲಸ ಸಿಗುವುದೆಂದು ತುಮಕೂರಿನ ಗುರುಸ್ವಾಮಿ ಎಂಬುವವರ ಕುಟುಂಬ ಕಳೆದ ಐದು ತಿಂಗಳ ಹಿಂದೆ ಕೂಲಿಯನ್ನರಸಿ ಪಟ್ಟಣಕ್ಕೆ ಬಂದಿದೆ. ಪಟ್ಟಣದ ಮಳಲಿ ಗ್ರಾಮಕ್ಕೆ ಹೋಗುವ ರಸ್ತೆಯ ಬದಿಯಲ್ಲಿರುವ ಖಾಲಿ ಗುಡಿಸಲಿನಲ್ಲಿ ಆಶ್ರಯ ಪಡೆದಿದ್ದು, ಶನಿವಾರ ಸುರಿದ ಮಳೆಗೆ ಇವರ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಎರಡು ಗುಡಿಸಲುಗಳಲ್ಲಿ ಈ ಕುಟುಂಬ ವಾಸವಾಗಿದ್ದು, ಒಟ್ಟು 8ಮಂದಿ ಅದರಲ್ಲಿ ನಾಲ್ಕು ಜನ ಮಕ್ಕಳು ಸಹ ಇದ್ದಾರೆ. ಕಳೆದೊಂದು ತಿಂಗಳಿನಿಂದ ಸರಿಯಾದ ಕೆಲಸವಿಲ್ಲದೇ ಊಟ ತಿಂಡಿಗೂ ಈ ಕುಟುಂಬ ಪರದಾಡುತ್ತಿದೆ.

ಸ್ವಂತ ಊರು ಇಲ್ಲ....ಕೆಲಸವು ಇಲ್ಲ: ಕೂಲಿ ಕಾರ್ಮಿಕರ ಪಾಡು ಕೇಳುವವರಿಲ್ಲ

ಕಳೆದ ಕೆಲವು ದಿನಗಳಿಂದ ಕೆಲವು ದಾನಿಗಳು ಇವರಿಗೆ ಊಟ ಹಾಗೂ ಆಹಾರ ಸಾಮಗ್ರಿಗಳನ್ನು ನೀಡಿದ್ದು, ಇದೀಗ ದಾನಿಗಳು ಅನುದಾನದ ಕೊರತೆಯಿಂದ ನೆರವು ನೀಡುವುದನ್ನು ನಿಲ್ಲಿಸಿರುವುದರಿಂದ ಈ ಕುಟುಂಬ ಆಹಾರಕ್ಕಾಗಿ ಪರದಾಡಬೇಕಾಗಿದೆ. ಗುರುಸ್ವಾಮಿ ತನ್ನ ಮಗನೊಡನೆ ಹಣ ತರುತ್ತೇನೆಂದು ಕದ್ದು-ಮುಚ್ಚಿ ಊರಿಗೆ ಹೋಗಿದ್ದು, ಅಲ್ಲಿ ಅವರಿಬ್ಬರನ್ನು ಅಧಿಕಾರಿಗಳು ಕ್ವಾರಂಟೈನ್​ಗೆ ಹಾಕಿದ್ದಾರೆ. ಇದರಿಂದಾಗಿ ಈ ಕುಟುಂಬ ಸಂಪೂರ್ಣವಾಗಿ ಆತಂಕಕ್ಕೆ ಒಳಗಾಗಿದೆ.

ರಾಜ್ಯ ಸರ್ಕಾರ ರಾಜ್ಯದೊಳಗಡೆ ಇರುವ ಕೂಲಿ ಕಾರ್ಮಿಕರನ್ನು ವಿವಿಧ ಜಿಲ್ಲೆಗಳಿಗೆ ಕಳುಹಿಸಲು ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಕಲ್ಪಿಸಿದ್ದು, ಈ ಹಿನ್ನೆಲೆಯಲ್ಲಿ ಹಲವು ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ತಮ್ಮ ಊರುಗಳಿಗೆ ತೆರಳಲು ಇಚ್ಛಿಸುವ ಕೂಲಿ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದರೆ, ತಾಲೂಕು ಆಡಳಿತ ಮಾತ್ರ ಕಣ್ಣುಮುಚ್ಚಿ ಕುಳಿತಿದ್ದು, ಈ ಕುರಿತು ಕೇಳಿದರೆ ಕೆಲಸಗಾರರನ್ನು ಕರೆ ತಂದಿರುವ ಮಾಲೀಕರೇ ಕಾರ್ಮಿಕರ ಖರ್ಚನ್ನು ನಿಭಾಯಿಸಬೇಕು ಎಂದು ಹೇಳುತ್ತಿದೆ. ಆದರೆ, ಅನೇಕ ಕೂಲಿ ಕಾರ್ಮಿಕರು ಸ್ವತಃ ಬಂದಿದ್ದು, ಇವರನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಯಾರು ಮಾಡುತ್ತಾರೆ? ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಈಗಾಗಲೇ ಜಿಲ್ಲಾಡಳಿತ ಪ್ರತಿ ತಾಲೂಕಿಗೆ ಸುಮಾರು 2 ಲಕ್ಷರೂ.ಗಳನ್ನು ಕೋವಿಡ್-19 ಎದುರಿಸಲು ನೀಡಿದ್ದು, ಜೊತೆಗೆ ಎನ್.ಡಿ.ಆರ್.ಎಫ್ ಹಾಗೂ ಯು.ಡಿ.ಆರ್.ಎಫ್ ನಿದಿಯಿಂದಲೂ ಸಹ ಕೂಲಿ ಕಾರ್ಮಿಕರನ್ನು ಹೊರ ಊರುಗಳಿಗೆ ಕಳುಹಿಸವ ಖರ್ಚನ್ನು ನಿಭಾಯಿಸಬಹುದಾಗಿದೆ. ಹಾಗಾಗಿ ಕೂಡಲೇ ತಾಲೂಕು ಆಡಳಿತದ ಜೊತೆಗೆ ಶಾಸಕರು ಸಹ ಇತ್ತ ಗಮನ ಹರಿಸಿ ಊರಿಗೆ ಹೋಗಲು ಇಚ್ಚಿಸುವ ಕೂಲಿ ಕಾರ್ಮಿಕರಿಗೆ ನೆರವಿನ ಹಸ್ತ ತೋರಬೇಕಾಗಿದೆ.

ABOUT THE AUTHOR

...view details