ಸಕಲೇಶಪುರ: ದೇಶಾದ್ಯಂತ ಲಾಕ್ಡೌನ್ ಆದೇಶ ಹೊರಬಿದ್ದ ಹಿನ್ನೆಲೆ ಯುಗಾದಿ ಹಬ್ಬಕ್ಕೂ ಮಂಕು ಕವಿದಿತ್ತು. ಪ್ರತಿವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿದ್ದ ಯುಗಾದಿ ಈ ಬಾರಿ ಮನೆಗಳಿಗೆ ಸೀಮಿತವಾಗಿದೆ.
ಕೊರೊನಾ ಭೀತಿ: ಯುಗಾದಿ ಹಬ್ಬಕ್ಕೆ ಕಿಕ್ಕಿರಿದು ತುಂಬುತ್ತಿದ್ದ ದೇವಸ್ಥಾನಗಳು ಖಾಲಿ ಖಾಲಿ - ಯುಗಾದಿ ಹಬ್ಬ
ಹಾಸನದ ಸಕಲೇಶಪುರವನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಈ ಹಿನ್ನೆಲೆ ಯುಗಾದಿ ಹಬ್ಬಕ್ಕೂ ಮಂಕು ಕವಿದಿತ್ತು. ಪ್ರತಿ ವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿದ್ದ ಯುಗಾದಿ ಈ ಬಾರಿ ಮನೆಗಳಿಗೆ ಸೀಮಿತವಾಗಿದೆ.

ಹಬ್ಬಕ್ಕೆ ಕಿಕ್ಕಿರಿದು ತುಂಬುತ್ತಿದ್ದ ದೇವಸ್ಥಾನಗಳು ಖಾಲಿ, ಖಾಲಿ
ಹಬ್ಬಕ್ಕೆ ಕಿಕ್ಕಿರಿದು ತುಂಬುತ್ತಿದ್ದ ದೇವಸ್ಥಾನಗಳು ಖಾಲಿ, ಖಾಲಿ
ಯುಗಾದಿ ಹಬ್ಬಕ್ಕೆ ದೇವಸ್ಥಾನಗಳಿಗೆ ದರ್ಶನಕ್ಕೆ ಹೋಗುವುದು ಭಾರತೀಯರ ನಂಬಕೆ. ಈ ಬಾರಿ ಕೊರೊನಾ ಮಹಾಮಾರಿಗೆ ತಾಲೂಕಿನಲ್ಲಿ ಸಹ ದೇವಸ್ಥಾನಗಳಲ್ಲಿ ಕೇವಲ ಅರ್ಚಕರಿಂದ ಪೂಜೆ ನಡೆದಿದ್ದು, ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು.
ಇನ್ನು ಹೂವು, ಹಣ್ಣು, ತರಕಾರಿ, ದಿನಸಿ ಅಂಗಡಿಗಳಿಗೆ ಹಬ್ಬದ ಅಂಗವಾಗಿ ತಾತ್ಕಾಲಿಕವಾಗಿ ತೆರೆಯಲು ಅವಕಾಶ ನೀಡಲಾಗಿತ್ತು. ತಾಲೂಕಿನ ಪ್ರಮುಖ ಹೋಬಳಿ ಕೇಂದ್ರಗಳನ್ನು ಮುಚ್ಚಲಾಗಿದೆ.