ಕರ್ನಾಟಕ

karnataka

ETV Bharat / state

ಕನ್ನಡದಲ್ಲೇ ಪರೀಕ್ಷೆ ಬರೆದು ಐಎಎಸ್ ಮುಖ್ಯ ಪರೀಕ್ಷೆ ಪಾಸ್ ಮಾಡಿದ ಗ್ರಾಮೀಣ ಪ್ರತಿಭೆ - ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಹಾಸನ ಜಿಲ್ಲೆಯ ಯುವಕ

ಪ್ರಾಥಮಿಕ ಶಾಲೆಯವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಹಾಸನ ಜಿಲ್ಲೆಯ, ಗ್ರಾಮೀಣ ಭಾಗದ ಯುವಕನೊಬ್ಬ ಐಎಎಸ್ ಮುಖ್ಯ ಪರೀಕ್ಷೆಯಲ್ಲಿ ಪಾಸ್ ಆಗಿದ್ದು ಸಂದರ್ಶನಕ್ಕೆ ಆಯ್ಕೆ ಆಗಿದ್ದಾರೆ.

rural-talent-who-passed-the-exam-in-kannada-and-passed-the-ias-main-exam
ಕನ್ನಡದಲ್ಲೇ ಪರೀಕ್ಷೆ ಬರೆದು ಐಎಎಸ್ ಮುಖ್ಯ ಪರೀಕ್ಷೆ ಪಾಸ್ ಮಾಡಿದ ಗ್ರಾಮೀಣ ಪ್ರತಿಭೆ...

By

Published : Jan 16, 2020, 1:48 PM IST

ಹಾಸನ:ಪ್ರಾಥಮಿಕ ಶಾಲೆಯವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಜಿಲ್ಲೆಯ, ಗ್ರಾಮೀಣ ಭಾಗದ ಯುವಕನೊಬ್ಬ ಐಎಎಸ್ ಮುಖ್ಯ ಪರೀಕ್ಷೆಯಲ್ಲಿ ಪಾಸ್ ಆಗಿದ್ದು ಸಂದರ್ಶನಕ್ಕೆ ಆಯ್ಕೆ ಆಗಿದ್ದಾರೆ.

ಅರಸೀಕೆರೆ ತಾಲೂಕಿನ, ಹರಳಕಟ್ಟೆ ಗ್ರಾಮದ ದರ್ಶನ್ ಐಎಎಸ್ ಪಾಸ್ ಮಾಡಿರುವ ಯುವಕ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಅಮೆರಿಕಾದಲ್ಲಿ ಸುಮಾರು ಮೂರು ವರ್ಷ ಕೆಲಸ ಮಾಡಿದ್ದ ದರ್ಶನ್, ಐಎಎಸ್ ಮಾಡಬೇಕೆಂಬ ಕನಸಿನೊಂದಿಗೆ ಎರಡೂವರೆ ಲಕ್ಷದ ಸಂಬಳದ ಕೆಲಸಕ್ಕೆ ಗುಡ್ ಬೈ ಹೇಳಿ ಊರಿಗೆ ವಾಪಸ್​ ಆಗಿದ್ದರು.

ನಂತರ ದೆಹಲಿ, ಬೆಂಗಳೂರಿನಲ್ಲಿ ಕೋಚಿಂಗ್ ಕೂಡ ಪಡೆದಿದ್ರು. ಕನ್ನಡದಲ್ಲೇ ಐಎಎಸ್ ಪರೀಕ್ಷೆ ಬರೆದಿರುವ ದರ್ಶನ್ ಎರಡು ಬಾರಿ ಪ್ರಿಲಿಮ್ಸ್ ಕೂಡ ಪಾಸ್ ಮಾಡಿದ್ದರು. ಇದೀಗ ಮೂರನೇ ಪ್ರಯತ್ನದಲ್ಲಿ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ಸಂದರ್ಶನ ನಡೆಯಲಿದ್ದು, ಐಎಎಸ್ ಫಲಿತಾಂಶ ಬಂದ ನಂತರ ದರ್ಶನ್ ಇಂದು ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಗ್ರಾಮಕ್ಕೆ ಆಗಮಿಸಿದ ದರ್ಶನ್ ಅವರಿಗೆ ಸಂಬಂಧಿಕರು ಮತ್ತು ಹಿತೈಷಿಗಳು ಹಾರ ಹಾಕಿ, ಸಿಹಿ ತಿನಿಸಿ ಸಂಭ್ರಮದಿಂದ ಸ್ವಾಗತಿಸಿದ್ದಾರೆ‌.

For All Latest Updates

TAGGED:

ABOUT THE AUTHOR

...view details