ಹಾಸನ:ಜಿಲ್ಲೆಯಲ್ಲಿ ಪದವಿ ಕಾಲೇಜುಗಳು ಪ್ರಾರಂಭವಾಗಿರುವ ಕಾರಣ ಎಲ್ಲ ಕಾಲೇಜು ವಿದ್ಯಾರ್ಥಿ ಹಾಗೂ ಉಪನ್ಯಾಸಕ ವೃಂದ ಆರ್ಟಿಪಿಸಿಆರ್ ಗಂಟಲು ದ್ರವ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ವಿಜಯ್ ತಿಳಿಸಿದ್ದಾರೆ.
ಹಾಸನ: ವಿದ್ಯಾರ್ಥಿಗಳು - ಉಪನ್ಯಾಸಕರಿಗೆ ಆರ್ಟಿಪಿಸಿಆರ್ ಲ್ಯಾಬ್ ಟೆಸ್ಟ್ ಕಡ್ಡಾಯ - RTPCR swab test compulsory for lectures
ಹಾಸನ ಜಿಲ್ಲೆಯಲ್ಲಿಯೂ ಎಲ್ಲ ಪದವಿ ಕಾಲೇಜುಗಳು ಬಾಗಿಲು ತೆರೆದ ಹಿನ್ನೆಲೆ ವಿದ್ಯಾರ್ಥಿಗಳು ಹಾಗು ಉಪನ್ಯಾಸಕರು ಆರ್ಟಿಪಿಸಿಆರ್ ಗಂಟಲು ದ್ರವ ಪರೀಕ್ಷೆಯನ್ನು ಮಾಡಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ವಿಜಯ್ ಸೂಚಿಸಿದ್ದಾರೆ.
ಈ ಹಿನ್ನೆಲೆ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಆಕಾಶವಾಣಿ ಹಿಂಭಾಗದಲ್ಲಿ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ, ಹೊಸ ಬಸ್ ನಿಲ್ದಾಣ, ನಗರ ಸಭೆ ಆವರಣ, ಆರ್ಟಿಒ ಕಚೇರಿ ಆವರಣ, ಎಂ.ಕೃಷ್ಣ ಆಸ್ಪತ್ರೆ ನಗರ ಆರೋಗ್ಯ ಕೇಂದ್ರ (ಹಳೆ ಮಟನ್ ಮಾರ್ಕೆಟ್), ಬೀರನಹಳ್ಳಿ ನಗರ ಆರೋಗ್ಯ ಕೇಂದ್ರ, ಹೊಯ್ಸಳ ನಗರ , ಪೆನ್‌ಕ್ಷನ್ ಮೊಹಲ್ಲಾ ನಗರ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಆರ್ಟಿಪಿಸಿಆರ್ ಪರೀಕ್ಷೆ ಮಾಡಲಾಗುವುದು.
ಮುಂದುವರಿದು ಹಾಸನ ತಾಲೂಕಿನ ಎಲ್ಲ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಆರ್ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಡಾ. ವಿಜಯ್ ತಿಳಿಸಿದ್ದಾರೆ.