ಕರ್ನಾಟಕ

karnataka

ETV Bharat / state

ಟ್ರಿಪ್​ಗೆಂದು ಕರೆದೊಯ್ದು ಎಣ್ಣೆ ಪಾರ್ಟಿ: ರೌಡಿಶೀಟರ್ ಕೊಂದು ಶವ ಹೂತು ಹಾಕಿದ ಆರೋಪಿಗಳು​ - ಈಟಿವಿ ಭಾರತ ಕನ್ನಡ ನ್ಯೂಸ್​​

ಹಳೆದ್ವೇಷ ಹಿನ್ನೆಲೆ - ಟ್ರಿಪ್​ಗೆಂದು ಕರೆದೊಯ್ದು ರೌಡಿಶೀಟರ್​ ಹತ್ಯೆ - ಶವ ಹೂತು ಹಾಕಿದ ಆರೋಪಿಗಳು

rowdy-sheeter-killed-in-hasana
ಟ್ರಿಪ್​ಗೆಂದು ಕರೆದೊಯ್ದು ಎಣ್ಣೆ ಪಾರ್ಟಿ : ರೌಡಿಶೀಟರ್ ಕೊಂದು ಶವ ಹೂತು ಹಾಕಿದ ಆರೋಪಿಗಳು​

By

Published : Mar 7, 2023, 6:33 PM IST

Updated : Mar 7, 2023, 7:08 PM IST

ಟ್ರಿಪ್​ಗೆಂದು ಕರೆದೊಯ್ದು ಎಣ್ಣೆ ಪಾರ್ಟಿ: ರೌಡಿಶೀಟರ್ ಕೊಂದು ಶವ ಹೂತು ಹಾಕಿದ ಆರೋಪಿಗಳು​

ಹಾಸನ : ಹಳೆ ದ್ವೇಷದ ಹಿನ್ನೆಲೆ ಟ್ರಿಪ್​​ಗೆ ಕರೆದೊಯ್ದು ರೌಡಿಶೀಟರ್​ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಸಂತೋಷ್ ಎಂಬಾತನೇ ಕೊಲೆಯಾದ ರೌಡಿಶೀಟರ್. ಪ್ರೀತಂ ಗೌಡ ಮತ್ತು ಆತನ ಸ್ನೇಹಿತ ಕೀರ್ತಿ ಕೊಲೆ ಮಾಡಿದ ಆರೋಪಿಗಳು ಎಂದು ತಿಳಿದು ಬಂದಿದೆ.

ಪ್ರಕರಣ ಹಿನ್ನೆಲೆ :2018ರಲ್ಲಿ ಬಾರ್​ವೊಂದರಲ್ಲಿ ನಡೆದ ಗಲಾಟೆ ಸಂಬಂಧ ಕೊಲೆಯಾದ ಸಂತೋಷ್ ಮತ್ತು ಪ್ರೀತಂ ಇಬ್ಬರು ಜೈಲು ಪಾಲಾಗಿದ್ದರು. ಬಳಿಕ ಜಾಮೀನಿ​ನ ಮೇಲೆ ಜೈಲಿನಿಂದ ಹೊರ ಬಂದಿದ್ದ ಇಬ್ಬರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದರು. ಗಲಾಟೆ ಸಂಬಂಧ ಇಬ್ಬರೂ ಒಬ್ಬರ ಮೇಲೊಬ್ಬರು ದ್ವೇಷ ಕಾರುತ್ತಿದ್ದರು. ಹೀಗಿರುವಾಗ ಇಬ್ಬರಿಗೂ ತಮ್ಮ ಮೇಲೆ ದಾಳಿ ಮಾಡಿ ಹತ್ಯೆ ಮಾಡುವ ಅನುಮಾನ ಇತ್ತು. ಈ ಸಂಬಂಧ ಪ್ರೀತಮ್ ಮೃತ ಸಂತೋಷನನ್ನು ಕೊಲೆ ಮಾಡಲು ಸಂಚು ರೂಪಿಸುತ್ತಾನೆ.

ತನ್ನ ಪೂರ್ವ ಸಂಚಿನಂತೆ ಪ್ರೀತಂ ಫೆಬ್ರವರಿ 9 ರಂದು ಟ್ರಿಪ್​ಗೆ ಎಂದು ಹೇಳಿ ಸಂತೋಷನನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಚಿಕ್ಕಮಗಳೂರಿಗೆ ಹೋಗಿದ್ದಾರೆ. ಬಳಿಕ ಅಲ್ಲಿ ಕುರವಂಜಿ ಫಾರೆಸ್ಟ್ ಸಮೀಪ ಟೆಂಟ್ ನಿರ್ಮಿಸಿ ಎಲ್ಲರೂ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ, ಸಂತೋಷ್​ಗೆ ಕಂಠಪೂರ್ತಿ ಕುಡಿಸಿದ ಆರೋಪಿಗಳು ತಾವು ಮೊದಲೇ ಯೋಜನೆ ರೂಪಿಸಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಬಳಿಕ ಅನತಿ ದೂರದಲ್ಲಿ ಸಂತೋಷ್​ನ ಶವವನ್ನು ಹೂತು ಹಾಕಿ ಏನೂ ಆಗಿಲ್ಲ ಎಂಬಂತೆ ಹಾಸನಕ್ಕೆ ವಾಪಸ್ ಆಗಿದ್ದರು.​

ಇನ್ನು ಹಲವು ದಿನಗಳು ಮನೆಗೆ ಬಾರದ ಮಗನಿಗಾಗಿ ಸಂತೋಷ್​ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಸುಳಿವು ಸಿಗದಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಪ್ರೀತಂ ಬಗ್ಗೆ ಪೋಷಕರು ನೀಡಿದ ಸಣ್ಣ ಸುಳಿವಿನಿಂದ ಪೊಲೀಸರು ಆರೋಪಿ ಪ್ರೀತಂ ಗೌಡನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊಲೆ ನಡೆದಿರುವುದು ಗೊತ್ತಾಗಿದೆ.

ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು​: ಕೊಲೆಯಾದ ಸಂತೋಷ್ 2018ರಲ್ಲಿ ಸಂತೋಷ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಜೈಲು ಪಾಲಾಗಿದ್ದ. ಈ ಪ್ರಕರಣದಲ್ಲಿ ಪ್ರೀತಂ ಗೌಡ ಕೂಡ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಇಬ್ಬರೂ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದರು. ಪ್ರೀತಮ್ ಗೌಡ ಕೊಲೆ ಪ್ರಕರಣ ಮತ್ತು ರಾಬರಿ ಪ್ರಕರಣ ಸೇರಿ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

ಕುಡಿದ ಅಮಲಿನಲ್ಲಿ ಸ್ನೇಹಿತನ ಕೊಲೆ :ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬನನ್ನು ಆತನ ಸ್ನೇಹಿತರೇ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವೀರಾಂಜನೇಯಲು, ಬುಡ್ಡಪ್ಪ ಹಾಗೂ ಗೋವರ್ಧನ್ ಎಂದು ಗುರುತಿಸಲಾಗಿದೆ. ಯಲಹಂಕ ನಿವಾಸಿ ಶ್ರೀಧರ್​ (34) ಎಂಬವರ ಶವ ಫೆಬ್ರವರಿ 7ರಂದು ಜಮೀನು ಒಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಜಮೀನಿನ ಮಾಲೀಕ ಸೋಲದೇವನಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ :ದೇವನಹಳ್ಳಿ: ಹೆಂಡತಿ ಕೈಗಳನ್ನೇ ಕತ್ತರಿಸಿ ಅಮಾನವೀಯತೆ ಮೆರೆದ ಗಂಡ

Last Updated : Mar 7, 2023, 7:08 PM IST

ABOUT THE AUTHOR

...view details