ಹಾಸನ: ರೌಡಿಗಳ ಪರೇಡ್ಗೆ ಬಂದಿದ್ದ ರೌಡಿಶೀಟರ್ ಓರ್ವ ಐಶಾರಾಮಿ ವಾಹನದಲ್ಲಿ ಮಾರಕಾಸ್ತ್ರಗಳನ್ನು ತಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆೆ ಹಾಸನದಲ್ಲಿ ನಡೆದಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ ಜಿಲ್ಲೆಯ ಚನ್ನರಾಯಪಟ್ಟಣ ಸೇರಿದಂತೆ ಹಲವೆಡೆ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ರೌಡಿಸಂ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಇವತ್ತು ಹಾಸನದ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಎಸ್ಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ರೌಡಿಗಳ ಪೆರೇಡ್ ಮಾಡಲಾಯಿತು. ರೌಡಿ ಪೆರೇಡ್ಗೆ ತಡವಾಗಿ ಬಂದರೂ ಐಷಾರಾಮಿ ಕಾರಲ್ಲಿ ಬಂದ ರೌಡಿ ಶೀಟರ್ನ ಕಾರಣ ಅನುಮಾನಗೊಂಡು ಎಸ್ಪಿ ಪರಿಶೀಲನೆ ಮಾಡಿದಾಗ ಕಾರಿನಲ್ಲಿ ಮಾರಕಾಸ್ತ್ರ ಸಿಕ್ಕಿದ್ದು, ಅದೇ ಕಾರಿನಲ್ಲಿ ಬಂದ ಪೊಲೀಸರು ಒಂದು ಕ್ಷಣ ನಿಬ್ಬೆರಗಾಗಿದ್ದಾರೆ.
ಖಾಕಿ ಕೋಟೆಯೊಳಗೆ ಮಾರಕಾಸ್ತ್ರ ತಂದು ತಾನಾಗೆ ಸಿಕ್ಕಿಬಿದ್ದ ರೌಡಿ ಶೀಟರ್ - ರೌಡಿಶೀಟರ್ ವಿಜಯ್ ಕುಮಾರ್
ಅಪರಾದ ಪ್ರಕರಣಗಳನ್ನು ಕಡಿಮೆ ಮಾಡಲೆಂದು ಪೊಲೀಸರು ರೌಡಿಗಳ ಪರೇಡ್ ನಡೆಸಿದರೆ, ಅಲ್ಲಿಗೆ ಬಂದ ರೌಡಿ ಶೀಟರ್ ಕಾರಿನಲ್ಲಿ ಮಾರಕಾಸ್ತ್ರಗಳನ್ನು ತಂದು ಸಿಕ್ಕಿಬಿದ್ದಿದ್ದಾನೆ.
ಪರೇಡ್ಗೆ ಚಾಕು ತಂದು ಸಿಕ್ಕಿಬಿದ್ದ ರೌಡಿ ಶೀಟರ್
ಸಾಮಾನ್ಯವಾಗಿ ರೌಡಿ ಪೆರೇಡ್ ಬರುವ ಅಪರಾಧಿಗಳು ಯಾವುದೇ ಮಾರಕಾಸ್ತ್ರ ಮತ್ತು ಇತರೆ ವಸ್ತುಗಳನ್ನು ತರೆದೇ ಬರುವುದು ಸರ್ವೇ ಸಾಮಾನ್ಯ. ಆದರೆ ಈತ ಮಾತ್ರ ಗೊತ್ತಿದ್ದು ಮಾರಕಾಸ್ತ್ರ ತಂದನೋ. . ? ಅಥವಾ ತನ್ನ ರಕ್ಷಣೆಗಾಗಿ ತಂದನೋ ಗೊತ್ತಿಲ್ಲ. ? ಆದರೆ ಖಾಕಿ ಕೋಟೆಯೊಳಗೆ ತಂದು ಸಿಕ್ಕಿಬಿದ್ದಿದ್ದು ಮಾತ್ರ ದುರಂತವೇ ಸರಿ.
ಇದನ್ನು ಓದಿ:ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ