ಹಾಸನ: ತಾಲೂಕಿನ ಶಾಂತಿಗ್ರಾಮ ಹೋಬಳಿ ಮರ್ಕುಲಿ ಕೊಪ್ಪಲಿನ ಕೆರೆಯ ಬಳಿ ರಸ್ತೆ ಬಿರುಕು ಬಿಟ್ಟಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಮರ್ಕುಲಿ ಕೊಪ್ಪಲಿನ ಕೆರೆ ಬಳಿ ರಸ್ತೆ ಬಿರುಕು: ವಾಹನ ಸಂಚಾರಕ್ಕೆ ನಿರ್ಬಂಧ - Markuli Koppal Lake news
ತಾಲೂಕಿನ ಶಾಂತಿಗ್ರಾಮ ಹೋಬಳಿ ಮರ್ಕುಲಿ ಕೊಪ್ಪಲಿನ ಕೆರೆಯ ಬಳಿ ರಸ್ತೆ ಬಿರುಕು ಬಿಟ್ಟಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಮರ್ಕುಲಿ ಕೊಪ್ಪಲಿನ ಕೆರೆಯ ಬಳಿ ರಸ್ತೆ ಬಿರುಕು
ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಹೆಚ್ಚು ಮಳೆ ಸುರಿದ ಕಾರಣ ಬಹುತೇಕ ಕೆರೆ ಕಟ್ಟೆಗಳೆಲ್ಲಾ ತುಂಬಿ ಹೋಗಿವೆ. ಮರ್ಕುಲಿ ಕೆರೆ ಕೂಡ ಸಂಪೂರ್ಣ ತುಂಬಿ ಹೋಗಿದ್ದು, ಕೆರೆಯ ರಸ್ತೆಯ ಮಧ್ಯೆ ದೊಡ್ಡದಾದ ಬಿರುಕು ಕಾಣಿಸಿಕೊಂಡಿದೆ.
ಮುನ್ನೆಚ್ಚರಿಕ ಕ್ರಮವಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಯಾವಾಗ ಬೇಕಾದರೂ ರಸ್ತೆ ಕುಸಿಯಬಹುದು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದರೂ ಯಾರು ಬಂದಿಲ್ಲ ಎಂದು ಮರ್ಕುಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ.