ಹಾಸನ:ಕೋವಿಡ್-19 (ಕೊರೊನಾ ವೈರಸ್ ಖಾಯಿಲೆ-19) ಮಹಾಮಾರಿಯನ್ನು ಹೊಡೆದೋಡಿಸಲು ಹಾಸನದ ಕೆಲ ಗ್ರಾಮಗಳು ಸ್ವಯಂಪ್ರೇರಿತವಾಗಿ ರಸ್ತೆ ಬಂದ್ ಮಾಡಿವೆ. ಈ ಮೂಲಕ ಇಲ್ಲಿನ ಜನರು ಹೊರಗಿನವರ ಪ್ರವೇಶಕ್ಕೆ ಕಟ್ಟುನಿಟ್ಟಿನ ತಾತ್ಕಾಲಿಕ ನಿರ್ಬಂಧ ಹೇರಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
ಹೂವಿನಹಳ್ಳಿಗೆ ಪ್ರವೇಶ ನಿಷೇಧ: ಹಳ್ಳಿಗಳಲ್ಲಿ ವಿಭಿನ್ನ ರೀತಿಯ ಸಾಮಾಜಿಕ ಅಂತರ
ಕೊರೊನಾ ಪಿಡುಗನ್ನು ತಡೆಗಟ್ಟಲು ಹಾಸನದ ಕೆಲ ಗ್ರಾಮಗಳು ಸ್ವಯಂಪ್ರೇರಿತವಾಗಿ ತಮ್ಮ ಗ್ರಾಮಕ್ಕೆ ಹೊರಗಿನ ಜನರ ಪ್ರವೇಶ ನಿರ್ಬಂಧಿಸಿವೆ.
hsn
ಹೊಳೆನರಸೀಪುರ ತಾಲೂಕಿನ ಹೂವಿನಹಳ್ಳಿ, ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಸಮೀಪದ ಕೊರಟಿಕೆರೆ ಕಾವಲು, ಗಂಗಾನಗರ ಮತ್ತು ಕಲ್ಲೂರು ಗ್ರಾಮದ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಸೋಂಕಿತರು, ಶಂಕಿತರು ಹಾಗೂ ಪಟ್ಟಣ ವಾಸಿಗಳು ಯಾರೂ ಮುಂದಿನ 21 ದಿನಗಳವರೆಗೆ ಬರುವುದೇ ಬೇಡ ಎನ್ನುತ್ತಿದ್ದಾರೆ.
ದಿನದಿಂದ ದಿನಕ್ಕೆ ಕೊರೊನಾ ಜಗದಗಲ ಹರಡುತ್ತಿದೆ. ಸರ್ಕಾರ ಈಗಾಗಲೇ 3 ವಾರಗಳ ಕಾಲ ಇಡೀ ಭಾರತವನ್ನು ಲಾಕ್ಡೌನ್ ಮಾಡಿದೆ. ಆದರೂ ನಗರ ಪ್ರದೇಶದ ಜನರು ಮಾತ್ರ ಮನೆಯಲ್ಲಿರದೆ ಸುಖಾಸುಮ್ಮನೆ ನಗರ ಪ್ರದಕ್ಷಿಣೆ ಹಾಕುವ ಮೂಲಕ ಆತಂಕ ಹೆಚ್ಚಿಸುತ್ತಿದ್ದಾರೆ.