ಸಕಲೇಶಪುರ:ತಾಲೂಕಿನ ಶಿರಾಡಿ ಘಾಟ್ನ ಜೋಡಿ ತಿರುವು ಬಳಿ ಟಾಟಾ ಸುಮೋ ಮತ್ತು ಕಂಟೇನರ್ ಲಾರಿ ಮುಖಾಮುಖಿ ಡಿಕ್ಕಿಯಾಗಿ ಏಳು ಜನರಿಗೆ ಗಾಯವಾಗಿ, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಶಿರಾಡಿ ಘಾಟ್ ಬಳಿ ಭೀಕರ ರಸ್ತೆ ಅಪಘಾತ: 7 ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ - Shiradighat
ಶಿರಾಡಿ ಘಾಟ್ನ ಜೋಡಿ ತಿರುವು ಬಳಿ ಟಾಟಾ ಸುಮೋ ಮತ್ತು ಕಂಟೇನರ್ ಲಾರಿ ನಡುವೆ ಅಪಘಾತ ಸಂಭವಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮೂಲದ ಏಳು ಜನರು ಧರ್ಮಸ್ಥಳ ಯಾತ್ರೆ ಮುಗಿಸಿ ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದ ವೇಳೆ ಟಾಟಾ ಸುಮೋ ಹಾಗೂ ಕಂಟೇನರ್ ನಡುವೆ ಡಿಕ್ಕಿ ಸಂಭವಿಸಿದೆ. ತಿರುವಿನಲ್ಲಿ ಕಂಟೇನರ್ ಹೊಡೆದ ರಭಸಕ್ಕೆ ಟಾಟಾ ಸುಮೋ ಸಂಪೂರ್ಣ ಜಖಂಗೊಂಡಿದೆ.
ಘಟನೆಯಲ್ಲಿ ಬಾಲಕೃಷ್ಣ (29), ಮಹೇಶ್ (29), ಲೋಕೇಶ್(27), ಮೋಹನ್ (30), ವಿನಯ್ (28), ಸುಬ್ರಮಣಿ (30), ಅಂಬರೀಷ್ (27) ಎಂಬುವವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಕಲೇಶಪುರ ಕಾಫರ್ಡ್ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಹಾಗೂ ಬೆಂಗಳೂರು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಘಟನೆ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.