ಕರ್ನಾಟಕ

karnataka

ETV Bharat / state

'ನನಗೆ ಬದುಕಲು ಇಷ್ಟವಿಲ್ಲ': ಡೆತ್​ನೋಟ್​ ಬರೆದಿಟ್ಟು ಕಂದಾಯ ಅಧಿಕಾರಿ ಆತ್ಮಹತ್ಯೆ - ಹಾಸನ ಅಪರಾಧ ಸುದ್ದಿ

ಕೆಲವು ದಿನಗಳ ಹಾಸನದಲ್ಲಿ ಗ್ರಾಮದಲ್ಲಿ ಲೆಕ್ಕಿಗರೊಬ್ಬರು ನೇಣಿಗೆ ಶರಣಾಗಿದ್ದರು. ಈ ಬೆನ್ನಲ್ಲೇ ಕಂದಾಯ ಅಧಿಕಾರಿಯೊಬ್ಬರು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

revenue-officer-suicide-in-hassan
ಡೆತ್​ನೋಟ್​ ಬರೆದಿಟ್ಟು ಕಂದಾಯ ಅಧಿಕಾರಿ ಆತ್ಮಹತ್ಯೆ

By

Published : Sep 23, 2021, 4:56 AM IST

ಹಾಸನ:ಡೆತ್​ನೋಟ್​ ಬರೆದಿಟ್ಟು ಸಕಲೇಶಪುರ ಪುರಸಭೆ ಕಂದಾಯ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿ.ಟಿ.ಗೋಪಾಲಕೃಷ್ಣ (41) ನೇಣಿಗೆ ಶರಣಾದ ಅಧಿಕಾರಿಯಾಗಿದ್ದಾರೆ.

ಗೋಪಾಲಕೃಷ್ಣ ಅವರು ಕಳೆದ ಎರಡು ವರ್ಷಗಳಿಂದ ಸಕಲೇಶಪುರ ಪುರಸಭೆ ಕಂದಾಯ ಅಧಿಕಾರಿಯಾಗಿದ್ದರು. 'ನನಗೆ ಬದುಕಲು ಇಷ್ಟವಿಲ್ಲ, ಆದ್ದರಿಂದ ಸಾಯುತ್ತಿದ್ದೇನೆ' ಎಂದು ಡೆತ್‌ನೋಟ್ ಬರೆದಿಟ್ಟು ಗೋಪಾಲಕೃಷ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೋಪಾಲಕೃಷ್ಣ ಅವರು ಹಾಸನ ನಗರದ ಹೊರವಲಯದ ಚಿಕ್ಕಕೊಂಡಗೊಳ ನಿವಾಸಿಯಾಗಿದ್ದಾರೆ. ಆತ್ಮಹತ್ಯೆ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಕೆಲವು ದಿನಗಳ ಹಿಂದೆ ಅನಾರೋಗ್ಯ ಕಾರಣದಿಂದ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಗ್ರಾಮದ ಲೆಕ್ಕಿಗರೊಬ್ಬರು ನೇಣಿಗೆ ಶರಣಾಗಿದ್ದರು. ಇದರ ಬೆನ್ನಲ್ಲೇ ಅವರ ಆತ್ಮಹತ್ಯೆ ಈಗ ಸಾಕಷ್ಟು ಅನುಮಾನಗಳನ್ನು ಹುಟ್ಟಿಸಿದೆ.

ಇದನ್ನೂ ಓದಿ:ಶೀಲ ಶಂಕಿಸಿ, ಚಾಕುವಿನಿಂದ ಹೆಂಡತಿ‌ ಕತ್ತು ಸೀಳಿದ ಗಂಡ..!

ABOUT THE AUTHOR

...view details