ಕರ್ನಾಟಕ

karnataka

ETV Bharat / state

ಜೆಡಿಎಸ್ - ಬಿಜೆಪಿ ನಡುವೆ ಜಾತಿ ಜಟಾಪಟಿ ನಡೀತಿದೆ; ರೇವಣ್ಣ ಗರಂ - ಹಾಸನ ಎಚ್.ಡಿ. ರೇವಣ್ಣ

ಹಾಸನ ನಗರಸಭೆ ಅಧ್ಯಕ್ಷ ಸ್ಥಾನ ಎಸ್​ಟಿಗೆ ಮೀಸಲಾತಿ ನಿಗದಿಯಾಗಿದೆ. ಆದ್ರೆ ಬಿಜೆಪಿಯಲ್ಲಿ ಮಾತ್ರ ಓರ್ವ ಎಸ್​ಟಿ ಅಭ್ಯರ್ಥಿ ಇದ್ದಾರೆ. ಜೆಡಿಎಸ್- ಬಿಜೆಪಿ ನಡುವೆ ಜಾತಿ ಜಟಾಪಟಿ ನಡೆಯುತ್ತಿದ್ದು, ರಾಜ್ಯದಲ್ಲಿ ಚುನಾವಣಾ ಆಯೋಗ ರಬ್ಬರ್ ಸ್ಟಾಂಪ್ ಇದ್ದ ಹಾಗೆ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Revanna
Revanna

By

Published : Oct 15, 2020, 3:46 PM IST

Updated : Oct 15, 2020, 5:13 PM IST

ಹಾಸನ:ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಕಳೆದ ಎರಡು ವರ್ಷಗಳ ಹಿಂದೆ ಕೊಟ್ಟ ಅರ್ಜಿಯನ್ನ ಅಧಿಕಾರಿಗಳು ವಿಲೇವಾರಿ ಮಾಡಿಲ್ಲ ಎಂದು ಮಾಜಿ‌ ಸಚಿವ ಹೆಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ನಗರಸಭೆ ಅಧ್ಯಕ್ಷ ಸ್ಥಾನ ಎಸ್​ಟಿ ಸಮುದಾಯಕ್ಕೆ ಮೀಸಲಾಗಿದೆ. ನಗರದ 34ನೇ ವಾರ್ಡ್​ನ ಅಭ್ಯರ್ಥಿ ಅಕ್ರಮವಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಿದರು.

ಹಾಸನ ಕಾನೂನು ವ್ಯವಸ್ಥೆ ಬಗ್ಗೆ ಗರಂ ಆದ ಮಾಜಿ ಸಚಿವ ರೇವಣ್ಣ

ಈಗ ನಗರಸಭೆ ಅಧ್ಯಕ್ಷರ ಮೀಸಲಾತಿ ಎಸ್​ಟಿ ಜನಾಂಗಕ್ಕೆ ನಿಗದಿಯಾಗಿದೆ. 34 ನೇ ವಾರ್ಡ್‌ನ ಬಿಜೆಪಿಯ ಮೋಹನ್ ಎಸ್​ಟಿ ಸಮಾಜಕ್ಕೆ ಸೇರಿಲ್ಲ. ಈ ಮೋಹನ್ ಮರಾಠಿ ಜನಾಂಗಕ್ಕೆ ಸೇರಿದ್ದಾರೆ, ಇವರ ತಂದೆ ಮರಾಠ ಜನಾಂಗಕ್ಕೆ ಸೇರಿದ್ದಾರೆ ಇವರು ಪ್ರವರ್ಗ 3 ಬಿಗೆ ಸೇರಿದ್ದು, ಮರಾಠ ಎಂದು ದಾಖಲಾತಿ ಇದೆ. ಮರಾಠಿ ಎಂಬ ಜಾತಿಯನ್ನ ಗೌಡ ಎಂದು ತಿದ್ದಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಈ ಬಗ್ಗೆ ತನಿಖೆ ನಡೆಸುವಂತೆ ಉಪ ವಿಭಾಗಾಧಿಕಾರಿಗೆ ಈ ಹಿಂದೆಯೇ ಸೂಚಿಸಲಾಗಿದೆ. ಆದ್ರೆ ಎಸಿ ತನಿಖೆ ನಡೆಸಿಲ್ಲ. ವಾಲ್ಮೀಕಿ ಜನಾಂಗಕ್ಕೆ ಮೋಸ ಮಾಡಿ ಎಸ್​ಟಿ ಜನಾಂಗ ಎಂದು ತಿದ್ದುಪಡಿ ಮಾಡಿದ್ದಾರೆ ಎಂದು ದೂರಿದರು.

ಮೋಹನ್‌ರವರು ಶಾಲಾ ದಾಖಲಾತಿಯಲ್ಲಿ ಮರಾಠ ಎಂದು ದಾಖಲಾಗಿದೆ. ಈಗ ಹಾಸನಕ್ಕೆ ಬಂದಿರುವ ಉಪವಿಭಾಗಾಧಿಕಾರಿ ಜಗದೀಶ್ ದಾಖಲಾತಿ ತಿದ್ದುವುದರಲ್ಲಿ ಎಕ್ಸ್​ಪರ್ಟ್ ಇದ್ದಾರೆ. ಹಿಂದೆ ಇದ್ದ ಉಪವಿಭಾಗಾಧಿಕಾರಿಯನ್ನ ರಾತ್ರಿ 12 ಗಂಟೆಯಲ್ಲಿ ವರ್ಗಾವಣೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಯಾವುದನ್ನು ಯಾವಾಗ ಯಾವ ದಾಖಲಾತಿ ಬೇಕಾದರೂ ತಿದ್ದುತ್ತದೆ ಎಂದು ಆರೋಪಿಸಿದರು.

ಹಾಸನದಲ್ಲಿ ವಿವಾದಕ್ಕೀಡಾದ ನಗರಸಭೆ ಅಧ್ಯಕ್ಷ ಸ್ಥಾನ ಚುನಾವಣೆಯಾಗಿದ್ದು, ನಾಳೆ ಹಾಸನ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಬಿಜೆಪಿಯವರು ಎಸ್​ಟಿ ದಾಖಲಾತಿ ತಿದ್ದುಪಡಿ ಮಾಡಿದ್ದಾರೆಂದು ಗಂಭೀರ ಆರೋಪಿಸಿದರು.

ಎಸ್​ಟಿ ಜನಾಂಗದ ದಾಖಲಾತಿ ಕೇಸ್ ತನಿಖೆಯಲ್ಲಿದೆ ಈ ಕೇಸ್ ಇನ್ನೂ ಪೆಂಡಿಂಗ್ ಇದೆ. ಆದ್ರೆ ಈ ಸ್ಥಾನ ಖಾಲಿ ಉಳಿಸಿಕೊಂಡು ಉಳಿದ ಸ್ಥಾನಕ್ಕೆ ಚುನಾವಣೆ ಮಾಡಬೇಕು ಎಂದು ರೇವಣ್ಣ ಆಗ್ರಹಿಸಿದರು.

ಹಾಸನ ನಗರಸಭೆ ಅಧ್ಯಕ್ಷ ಸ್ಥಾನ ಎಸ್​ಟಿಗೆ ಮೀಸಲಾತಿ ನಿಗದಿಯಾಗಿದೆ. ಆದ್ರೆ ಬಿಜೆಪಿಯಲ್ಲಿ ಮಾತ್ರ ಒಬ್ಬ ಎಸ್​ಟಿ ಅಭ್ಯರ್ಥಿ ಇದ್ದಾರೆ. ಜೆಡಿಎಸ್- ಬಿಜೆಪಿ ನಡುವೆ ಜಾತಿ ಜಟಾಪಟಿ ನಡೆಯುತ್ತಿದ್ದು, ರಾಜ್ಯದಲ್ಲಿ ಚುನಾವಣಾ ಆಯೋಗ ರಬ್ಬರ್ ಸ್ಟಾಂಪ್ ಇದ್ದ ಹಾಗೆ. ನಾನು ಯಾವುದಕ್ಕೂ ಹೆದರೊಲ್ಲ ನೇರವಾಗಿ ಹೇಳ್ತೀನಿ ಎಂದರು.

ಕಳೆದ 6 ತಿಂಗಳ ಮುಂಚೆಯೇ ಗ್ರಾಪಂ ಚುನಾವಣೆ ಮಾಡಬೇಕಿತ್ತು. ಚುನಾವಣೆ ಆಯೋಗ ಅಸಹಾಯಕ ಆಗಿರೋದ್ರಿಂದ ಈಗ ಆಡಳಿತಾಧಿಕಾರಿ ನೇಮಿಸಿದ್ದಾರೆ. ನಮ್ಮ ಮನೆಯ ಏರಿಯಾದಲ್ಲೇ ಗ್ರಾಪಂ, ಚುನಾವಣೆಗೆ ಎಸ್​ಟಿಗೆ ಮೀಸಲಾತಿ ಮಾಡಿದ್ದಾರೆ. ನಮ್ಮ ಏರಿಯಾದಲ್ಲಿ ಮತ್ತು ಅಕ್ಕಪಕ್ಕ ವೀರಶೈವ ಲಿಂಗಾಯತ ಜನಾಂಗ ಇದೆ. ಯಡಿಯೂರಪ್ಪನವರೇ ನಿಮ್ ಜನಾಂಗದವರೇ ಇದ್ದಾರೆ. ಆದ್ರೆ ಇಲ್ಲಿ ಎಸ್​ಸಿಗೆ ಮೀಸಲಾತಿ ನಿಗದಿ ಮಾಡಿದ್ದೀರಿ ಎಂದು ಟೀಕಿಸಿದರು.

Last Updated : Oct 15, 2020, 5:13 PM IST

ABOUT THE AUTHOR

...view details