ಹಾಸನ: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಸಲಹೆಗಾರ ದೊರೆಸ್ವಾಮಿಗೆ ಬಡವರ ಕಷ್ಟ ಗೊತ್ತಿದೆಯಾ? ಅವರು ಬಡವರ ಲೂಟಿಕೋರರು ಮತ್ತು ಅವರ ಸಂಸ್ಥೆ ವ್ಯಾಪಾರಿ ಸಂಸ್ಥೆಯಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.
ದೊರೆಸ್ವಾಮಿ ವಿರುದ್ಧ ಹೆಚ್ ಡಿ ರೇವಣ್ಣಕಿಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಬೇರೆ ಯಾವ ಶಿಕ್ಷಣ ತಜ್ಞರು ಸಿಗಲಿಲ್ವಾ? ಬಡವರನ್ನು ಲೂಟಿ ಮಾಡುವವರು ಶಿಕ್ಷಣ ಸಲಹೆಗಾರರಾಗಿದ್ದಾರೆ.
ಇಂಥವನ್ನು ಸಲಹೆಗಾರರನ್ನಾಗಿ ಮಾಡಿಕೊಂಡರೆ ಶಿಕ್ಷಣ ಇಲಾಖೆ ಬಾಗಿಲು ಮುಚ್ಚಬೇಕಾಗುತ್ತೆ ಎಂದು ಆರೋಪಿಸಿದರು. ಕಾಲೇಜುಗಳಲ್ಲಿ ಉಪನ್ಯಾಸಕರೇ ಇಲ್ಲ. ಸರ್ಕಾರ ಖಾಸಗಿ ಹಿಡಿತಕ್ಕೆ ಸಿಕ್ಕಿದೆಯೋ ಎಂಬ ಅನುಮಾನ ಕಾಡುತ್ತಿದೆ.
ಕೆಲವು ಕಡೆ ಉಪನ್ಯಾಸಕರಿಲ್ಲ. ಕಳೆದ ಹತ್ತು ವರ್ಷಗಳಿಂದ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಪ್ರಾಥಮಿಕ ಶಾಲೆಗಳು ಖಾಸಗಿಯವರ ಹೊಡೆತಕ್ಕೆ ಸಿಲುಕಿ ಮುಚ್ಚಿ ಹೋಗುತ್ತಿವೆ. ಈಗ ಕಾಲೇಜುಗಳನ್ನು ಮುಚ್ಚಲು ಸರ್ಕಾರ ಹೊರಟಿದೆ ಎಂದು ದೂರಿದರು.
ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಸಿಎಸ್‌ಆರ್ ಫಂಡ್ ಅನ್ನು ಜಿಲ್ಲೆಯಲ್ಲಿ ಮೂಲಸೌಕರ್ಯದಿಂದ ವಂಚಿತವಾಗಿರುವ ಶಾಲಾ- ಕಾಲೇಜುಗಳಿಗೆ ಸೌಲಭ್ಯ ಕಲ್ಪಿಸುವಂತೆ ಇದೇ ವೇಳೆ ಒತ್ತಾಯಿಸಿದರು.