ಹಾಸನ :2014ರಲ್ಲಿ ಮಂಜೂರಾತಿ ನೀಡಲಾದ ಎತ್ತಿನ ಹೊಳೆ ನೀರಾವರಿ ಯೋಜನೆ 5 ವರ್ಷ ಕಳೆದರೂ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ, ವಿಳಂಬಕ್ಕೆ ಮಾಜಿ ಸಚಿವ ರೇವಣ್ಣ ನೇರ ಹೊಣೆ ಎಂದು ಮಾಜಿ ಸಚಿವ ಬಿ. ಶಿವರಾಂ ಆರೋಪಿಸಿದ್ದಾರೆ.
ಎತ್ತಿನ ಹೊಳೆ ನೀರಾವರಿ ಯೋಜನೆ ವಿಳಂಬಕ್ಕೆ ರೇವಣ್ಣ ನೇರ ಹೊಣೆ : ಬಿ. ಶಿವರಾಂ
2014ರಲ್ಲಿ ಮಂಜೂರಾತಿ ನೀಡಲಾದ ಎತ್ತಿನ ಹೊಳೆ ನೀರಾವರಿ ಯೋಜನೆ 5 ವರ್ಷ ಕಳೆದರೂ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ, ವಿಳಂಬಕ್ಕೆ ಮಾಜಿ ಸಚಿವ ರೇವಣ್ಣ ನೇರ ಹೊಣೆ ಎಂದು ಮಾಜಿ ಸಚಿವ ಬಿ. ಶಿವರಾಂ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಅಭಿವೃದ್ಧಿ ಅಂದರೆ ಇದೇನಾ, ಮೈತ್ರಿ ಎಂದರೆ ಇದೇನಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ. ಶಿವರಾಂ, ಎತ್ತಿನಹೊಳೆ ಕಾಮಗಾರಿ ಮಂಜೂರಾತಿ ವೇಳೆ 4,128 ಕೋಟಿ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ 3,000 ಕೋಟಿ ಹಣ ಯೋಜನೆ ಅನುಷ್ಠಾನಕ್ಕೆ ವ್ಯಹಿಸಲಾಗಿದೆ, ಅದರೂ ಕಾಮಗಾರಿ ಸಮರ್ಪಕವಾಗಿ ಕಾರ್ಯಗತವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ರೇವಣ್ಣನನ್ನು ದೂರಿದ ಅವರು, ಅಭಿವೃದ್ಧಿ ಅಂದರೆ ಇದೇನಾ, ಮೈತ್ರಿ ಎಂದರೆ ಇದೇನಾ ಎಂದು ಆಕ್ರೋಶ ವ್ಯಕ್ತಪಡಿಸಿ, ನಾನ್ಯಾವತ್ತೂ ಮಾಜಿ ಸಚಿವರನ್ನು ಬೆಂಬಲಿಸಿಲ್ಲ ಎಂದರು. ಜೊತೆಗೆ ಹಾಸನದ ರಸ್ತೆಗಳನ್ನು ಎರಡು ದಿನದಲ್ಲಿ ವಿಸ್ತರಣೆ ಮಾಡಲು ಇರುವ ಮನಸ್ಸು ಎತ್ತಿನಹೊಳೆ ಯೋಜನೆ ಜಾರಿಗೆ ಇರಲಿಲ್ಲ ಎಂದರು. ಒಟ್ಟಾರೆ, ರೇವಣ್ಣ ಅವರ ಆಡಳಿತದಿಂದಲೇ ಎತ್ತಿನ ಹೊಳೆ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದರು.