ಕರ್ನಾಟಕ

karnataka

ಅಲ್ಪಸಂಖ್ಯಾತರನ್ನ ಕಡೆಗಣಿಸದೆ ಅವರ ಧಾರ್ಮಿಕ ವಿಚಾರದಲ್ಲಿ ಒಗ್ಗಟ್ಟಾಗಿರಿ: ಸಂಸದ ಪ್ರಜ್ವಲ್ ರೇವಣ್ಣ

By

Published : Oct 19, 2019, 4:35 PM IST

ಜೆಡಿಎಸ್ ಸದಸ್ಯರು, ಅಧ್ಯಕ್ಷರು ಸೇರಿ ಮುಸ್ಲಿಂ ಜನಾಂಗದವರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕು. ಅಲ್ಪಸಂಖ್ಯಾತರನ್ನ ಕಡೆಗಣಿಸದೆ ಅವರ ಧಾರ್ಮಿಕ ವಿಚಾರದಲ್ಲಿ ಒಗ್ಗಟ್ಟಾಗಿ ಒಟ್ಟಿಗೆ ಇರುವಂತೆ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ

ಹಾಸನ: ಜೆಡಿಎಸ್ ಸದಸ್ಯರು, ಅಧ್ಯಕ್ಷರು ಸೇರಿ ಮುಸ್ಲಿಂ ಜನಾಂಗದವರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕು. ಅಲ್ಪಸಂಖ್ಯಾತರನ್ನ ಕಡೆಗಣಿಸದೇ ಅವರ ಧಾರ್ಮಿಕ ವಿಚಾರದಲ್ಲಿ ಒಗ್ಗಟ್ಟಾಗಿ ಇರುವಂತೆ ಸಂಸದ ಪ್ರಜ್ವಲ್ ರೇವಣ್ಣ ಕರೆ ನೀಡಿದ್ದಾರೆ.

ಅಲ್ಪಸಂಖ್ಯಾತರನ್ನ ಕಡೆಗಣಿಸದೆ ಅವರ ಧಾರ್ಮಿಕ ವಿಚಾರದಲ್ಲಿ ಒಗ್ಗಟ್ಟಾಗಿರಿ:ಸಂಸದ ಪ್ರಜ್ವಲ್ ರೇವಣ್ಣ

ವಿವಿಧ ಕಾಮಗಾರಿಗಳಿಗಾಗಿ ಬೇಲೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬೇಲೂರು ತಾಲೂಕಿನ ಅಭಿವೃದ್ದಿಗೆ ಸಂಬಂಧಿಸಿದಂತೆ ವಿವಿಧ ಕಾಮಗಾರಿಗಳಿಗೆ ಈಗಾಗಲೇ ಸುಮಾರು 800 ಕೋಟಿ ರೂ. ಅನುದಾನ ಬಂದಿದೆ. ಅನುದಾನ ಬಂದ ತಕ್ಷಣ ಕೆಲಸ ಮಾಡಬೇಕೆಂಬುದೇನಿಲ್ಲ. ಕಾಲಕ್ರಮೇಣ ಸಂಪೂರ್ಣ ಕೆಲಸಗಳು ನಡೆಯುತ್ತವೆ. ಈಗಾಗಲೇ ನಾಗೇನಹಳ್ಳಿಯಲ್ಲಿ ಮುಸ್ಲಿಂ ಬಾಂಧವರ ಸಮುದಾಯ ಭವನಕ್ಕೆ ರೇವಣ್ಣನವರು 10 ಲಕ್ಷ ರೂ ಹಣ ನೀಡಿದ್ದು, ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದರು.

ಸರ್ಕಾರ ಹಾಸನ ಜಿಲ್ಲೆಗೆ ಅನುದಾನ ಹಾಗೂ ಅಭಿವೃದ್ಧಿ ಕಾರ್ಯದಲ್ಲಿ ದ್ವೇಷ ರಾಜಕಾರಣ ಮಾಡಿದರೆ, ಜಿಲ್ಲೆಯ ಜನತೆಯೊಂದಿಗೆ ಸೇರಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ABOUT THE AUTHOR

...view details