ಹಾಸನ:ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ದಿನ ಬಳಕೆ ವಸ್ತುಗಳು ಸೇರಿದಂತೆ ಆಹಾರ ಪದಾರ್ಥಗಳನ್ನು ಶ್ರವಣಬೆಳಗೊಳದ ಜೈನ ಮಠದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಸ್ತಾಂತರಿಸಿದರು.
ಮಠದಿಂದ ನೆರೆ ಪೀಡಿತರ ಆರೋಗ್ಯದ ದೃಷ್ಟಿಯಿಂದ ₹ 25 ಲಕ್ಷ ನೆರವನ್ನು ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 10 ಲಕ್ಷ ಈಗಾಗಲೇ ನೀಡಿದೆ.
ಜೈನಕಾಶಿಯಿಂದ ಹರಿದುಬಂತು ನೆರೆ ಸಂತ್ರಸ್ತರಿಗೆ ಪರಿಹಾರ
ನೆರೆ ಹಾವಳಿಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ದಿನ ಬಳಕೆ ವಸ್ತುಗಳು ಸೇರಿದಂತೆ ಆಹಾರ ಪದಾರ್ಥಗಳನ್ನು ಶ್ರವಣಬೆಳಗೊಳದ ಜೈನ ಮಠದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.
Relief for neighboring people
ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಇಂತಹ ಪ್ರವಾಹ ಎದುರಾಗುತ್ತದೆ ಅಂತ ಊಹಿಸಿರಲಿಲ್ಲ. ಆದರೆ, ಈಗ ನೆರೆಯಿಂದ ಬೀದಿಗೆ ಬಂದಿರುವ ಜನರ ಬದುಕನ್ನು ಮತ್ತೆ ಸ್ಥಾಪಿಸಬೇಕಿದೆ. ಹಾಗಾಗಿ ಇನ್ನೂ ಹೆಚ್ಚಿನ ಅವಶ್ಯಕತೆಯಿದ್ದರೆ, ಮಠದಿಂದ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.
ಶ್ರೀಮಠ ಶ್ರವಣಬೆಳಗೊಳ ಮತ್ತು ಮೈಸೂರಿನ ಸಿ.ಎಫ್.ಟಿ.ಆರ್.ಐ ನಿಂದ ಬಂದಿರುವ ಆಹಾರ ಸಾಮಗ್ರಿಗಳ ಸಕಲೇಶಪುರ ಅರಕಲಗೂಡು ಮತ್ತು ಹೊಳೆನರಸೀಪುರ ತಾಲೂಕಿನ ನೆರೆ ಸಂತ್ರಸ್ಥರಿಗೆ ಸಮನಾಗಿ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.