ಹಾಸನ (ಚನ್ನರಾಯಪಟ್ಟಣ):ನಗರದಲ್ಲಿ ಕ್ವಾರಂಟೈನ್ನಲ್ಲಿದ್ದ 53 ಜನರನ್ನು ಅವರ ಸ್ವಗ್ರಾಮಗಳಿಗೆ ಕಳಿಸಿಕೊಡಲಾಗಿದೆ.
ಚನ್ನರಾಯಪಟ್ಟದಲ್ಲಿ ಕ್ವಾರಂಟೈನ್ನಲ್ಲಿದ್ದ 53 ಜನರ ಬಿಡುಗಡೆ - Release of 53 people in Quarantine at Channarayapatam
ಹಾಸನದ ಚನ್ನರಾಯಪಟ್ಟದಲ್ಲಿ ಕ್ವಾರಂಟೈನ್ನಲ್ಲಿದ್ದ 53 ಜನರನ್ನು ಅವರವರ ಸ್ವಗ್ರಾಮಗಳಿಗೆ ಕಳುಹಿಸಲಾಗಿದೆ.
![ಚನ್ನರಾಯಪಟ್ಟದಲ್ಲಿ ಕ್ವಾರಂಟೈನ್ನಲ್ಲಿದ್ದ 53 ಜನರ ಬಿಡುಗಡೆ ಕ್ವಾರಂಟೈನ್ನಲ್ಲಿದ್ದ 53 ಜನರ ಬಿಡುಗಡೆ](https://etvbharatimages.akamaized.net/etvbharat/prod-images/768-512-7362819-thumbnail-3x2-mng.jpg)
ಕ್ವಾರಂಟೈನ್ನಲ್ಲಿದ್ದ 53 ಜನರ ಬಿಡುಗಡೆ
ಮಹಾರಾಷ್ಟ್ರ ಹಾಗೂ ಗುಜರಾತ್ನಿಂದ ಆಗಮಿಸಿದ್ದ ಜನರಿಗೆ ಚನ್ನರಾಯಪಟ್ಟಣದ ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ಗೊಳಪಡಿಸಲಾಗಿತ್ತು. ಆದರೆ ಅವರಲ್ಲಿ ಕೊರೊನಾ ಕಂಡು ಬಂದಿರಲಿಲ್ಲ. ಒಟ್ಟಾರೆಯಾಗಿ ಇಲ್ಲಿವರೆಗೂ 82 ಜನರನ್ನು ಸ್ವಗ್ರಾಮಗಳಿಗೆ ಕಳುಹಿಸಿಕೊಡಲಾಗಿದೆ.
ಕ್ವಾರಂಟೈನ್ನಲ್ಲಿದ್ದ 53 ಜನರ ಬಿಡುಗಡೆ
ಸ್ಥಳಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಭೇಟಿ ನೀಡಿ ಕ್ವಾರಂಟೈನ್ ಮುಗಿಸಿ ಮನೆಗೆ ಹೊರಡುತ್ತಿದ್ದ ಜನರಿಗೆ ಕೆಲ ಸಲಹೆ ನೀಡಿದರು. ಇನ್ನು ಮೂರು-ನಾಲ್ಕು ದಿನ ಮನೆಯಿಂದ ಹೊರಗೆ ಬರಬಾರದು. ಅಂತರ ಕಾಯ್ದುಕೊಂಡು ಮನೆಯಲ್ಲಿ ಇರಿ ಎಂದರು. ಇದೇ ವೇಳೆ ಪೊಲೀಸ್ ಇಲಾಖೆ, ವೈದ್ಯರು, ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.