ಹಾಸನ: ಸವಿತಾ ಸಮಾಜದ ಕುಟುಂಬಗಳು ಬೀದಿಗೆ ಬಂದಿರುವುದರಿಂದ ಸರ್ಕಾರದಿಂದ ನೀಡುವ ಹಣವು ಜೀವನ ನಿರ್ವಹಣೆಗೆ ಕಷ್ಟಕರವಾಗಿದ್ದು, ಕನಿಷ್ಠ 10 ಸಾವಿರ ರೂ.ಗಳನ್ನು ನೀಡಬೇಕೆಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್ ಒತ್ತಾಯಿಸಿದರು.
ಸವಿತಾ ಸಮಾಜಕ್ಕೆ 10 ಸಾವಿರ ರೂಪಾಯಿ ಸಹಾಯಧನ ನೀಡಲಿ: ರವಿಕುಮಾರ್ ಒತ್ತಾಯ - ಹಾಸನ ಸುದ್ದಿ
ಸವಿತಾ ಸಮಾಜದ ಮತ್ತೊಂದು ಕುಲ ವೃತ್ತಿಯಾದ ಮಂಗಳವಾದ್ಯ ಕಲಾವಿದರು ಸಹ ಲಾಕ್ಡೌನ್ ದಿನದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಘೋಷಣೆ ಮಾಡಿದ 2 ಸಾವಿರ ರೂ.ನಿಂದ ಕುಟುಂಬ ನಿರ್ವಹಣೆ ಅಸಾಧ್ಯ. ಹೀಗಾಗಿ ಸವಿತಾ ಸಮಾಜ ಹಾಗೂ ಕಲಾವಿದರಿಗೆ 10 ಸಾವಿರ ರೂಪಾಯಿ ಸಹಾಯಧನ ನೀಡಿ ಸರ್ಕಾರ ನೆರವಾಗಬೇಕಿದೆ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸವಿತಾ ಸಮಾಜದ ಮತ್ತೊಂದು ಕುಲ ವೃತ್ತಿಯಾದ ಮಂಗಳವಾದ್ಯ ಕಲಾವಿದರು ಸಹ ಲಾಕ್ಡೌನ್ ದಿನದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹೆಚ್ಚು ಶುಭ ಕಾರ್ಯಗಳು ನಡೆಯುತ್ತವೆ.
ಆದರೆ ಕೊರೊನಾ ವೈರಸ್ ಭೀತಿಯಿಂದ ಎಲ್ಲಾ ಶುಭ ಸಮಾರಂಭಗಳು ರದ್ದಾಗಿರುವುದರಿಂದ ಮಂಗಳವಾದ್ಯ ನಡೆಸುವ ಕಲಾವಿದರ ಕುಟುಂಬಗಳು ಬೀದಿಪಾಲಾಗಿದ್ದು, ಇಂಥವರಿಗೆ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ ಸರ್ಕಾರವು 2 ಸಾವಿರ ರೂ.ಗಳನ್ನು ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ. ಆದರೆ ಇಷ್ಟು ಹಣದಿಂದ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಕನಿಷ್ಠ 10 ಸಾವಿರ ರೂಪಾಯಿಯಾದರೂ ನೀಡಲು ಮನವಿ ಮಾಡಿದರು.