ಕರ್ನಾಟಕ

karnataka

ETV Bharat / state

ಡಿಸಿ ಕಚೇರಿ ನೆಲಸಮ ಮಾಡಿದ್ರೆ ದೊಡ್ಡಹಳ್ಳಿ ಗೋಲಿಬಾರ್ ಪ್ರಕರಣ ಮರುಕಳಿಸುತ್ತದೆ : ಹೆಚ್ ಡಿ ರೇವಣ್ಣ

ರಾಜ್ಯಸಭಾ ಸದಸ್ಯ ಹೆಚ್ ಡಿ ದೇವೇಗೌಡರ ಹೋರಾಟದ ಫಲವಾಗಿ ಮತ್ತೊಂದು ಬಾರಿಗೆ ರಾಗಿ ಖರೀದಿ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಸರ್ವರ್ ಸಮಸ್ಯೆ ಮುಂದಿಟ್ಟು ಕೆಲವು ಕಡೆ ದಲ್ಲಾಳಿಗಳಿಂದ ಖರೀದಿ ಮಾಡಿ, ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಮಾಜಿ ಸಚಿವ ಹೆಚ್​ ಡಿ ರೇವಣ್ಣ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ..

ಡಿಸಿ ಕಚೇರಿ ನೆಲಸಮ ಮಾಡಿದ್ರೆ ದೊಡ್ಡಹಳ್ಳಿ ಗೋಲಿಬಾರ್ ಪ್ರಕರಣ ಮರುಕಳಿಸುತ್ತದೆ ಎಂದ ಹೆಚ್ ಡಿ ರೇವಣ್ಣ
ಡಿಸಿ ಕಚೇರಿ ನೆಲಸಮ ಮಾಡಿದ್ರೆ ದೊಡ್ಡಹಳ್ಳಿ ಗೋಲಿಬಾರ್ ಪ್ರಕರಣ ಮರುಕಳಿಸುತ್ತದೆ ಎಂದ ಹೆಚ್ ಡಿ ರೇವಣ್ಣ

By

Published : Apr 29, 2022, 3:23 PM IST

Updated : Apr 29, 2022, 4:12 PM IST

ಹಾಸನ: ಡಿಸಿ ಕಚೇರಿ ಕಟ್ಟಡ ತೆರವು ಮಾಡಿದರೆ ದೊಡ್ಡಳ್ಳಿ ಗೋಲಿಬಾರ್ ಮತ್ತೊಮ್ಮೆ ಮರುಕಳಿಸುತ್ತದೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಬಿಜೆಪಿ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯನ್ನು ಯಾವುದೇ ಕಾರಣಕ್ಕೂ ನೆಲಸಮ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.

ಹಾಸನದ ಪ್ರವಾಸಿಮಂದಿರದಲ್ಲಿ ಮಾತನಾಡಿದ ಅವರು, ನಮ್ಮ ಹಾಸನದ ಡಿಸಿಗಳು ಜಿಲ್ಲಾಧಿಕಾರಿ ಕಚೇರಿಯನ್ನು ಬಿಜೆಪಿ ಆಫೀಸ್ ಮಾಡಿಕೊಂಡಿದ್ದಾರೆ. ಈಗ ಅದನ್ನು ನೆಲಸಮ ಮಾಡುವುದಾದರೆ ರೀಪೇರಿಗೆ ಅಂತಾ 3 ಕೋಟಿ ರೂ. ಖರ್ಚು ಮಾಡಬೇಕಿರಲಿಲ್ಲ. ಕಟ್ಟಡ ಗುಣಮಟ್ಟದಿಂದ ಕೂಡಿದೆ. ಅದನ್ನು ಧ್ವಂಸ ಮಾಡಿದರೆ ಹಿಂದೆ ನಡೆದ ದೊಡ್ಡಳ್ಳಿ ಗೋಲಿಬಾರ್ ಘಟನೆ ಡಿಸಿ ಕಚೇರಿಯ ಪ್ರಕರಣದಲ್ಲಿ ಜರುಗಬಹುದು ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಇದನ್ನೂ ಓದಿ: ದಿನದ ಮಟ್ಟಿಗೆ ಅರಣ್ಯಾಧಿಕಾರಿಯಾಗಿ ಕ್ಯಾನ್ಸರ್‌ಪೀಡಿತ ಬಾಲಕಿಯ ಕನಸು ನನಸು!

ರಾಜ್ಯಸಭಾ ಸದಸ್ಯ ಹೆಚ್. ಡಿ. ದೇವೇಗೌಡರ ಹೋರಾಟದ ಫಲವಾಗಿ ಮತ್ತೊಂದು ಬಾರಿಗೆ ರಾಗಿ ಖರೀದಿ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಸರ್ವರ್ ಸಮಸ್ಯೆ ಮುಂದಿಟ್ಟು ಕೆಲವು ಕಡೆ ದಲ್ಲಾಳಿಗಳಿಂದ ಖರೀದಿ ಮಾಡಿ, ರೈತರಿಗೆ ಅನ್ಯಾಯ ಮಾಡಲಾಗಿದೆ. ದಯಮಾಡಿ ಸರ್ಕಾರ ಬಡರೈತರನ್ನು ಬೀದಿಗೆ ತಳ್ಳಬೇಡಿ ಎಂದು ಇದೇ ವೇಳೆ ಮನವಿ ಮಾಡಿದರು.

ಡಿಸಿ ಕಚೇರಿ ನೆಲಸಮ ಮಾಡಿದ್ರೆ ದೊಡ್ಡಹಳ್ಳಿ ಗೋಲಿಬಾರ್ ಪ್ರಕರಣ ಮರುಕಳಿಸುತ್ತದೆ : ಹೆಚ್ ಡಿ ರೇವಣ್ಣ

ಏನಿದು ಗೋಲಿಬಾರ್ ಪ್ರಕರಣ ? :

ಹೊಳೆನರಸೀಪುರ ತಾಲೂಕು ದೊಡ್ಡಹಳ್ಳಿ ಗ್ರಾಮದಲ್ಲಿ 1982 ಸೆಪ್ಟೆಂಬರ್ 23 ರಂದು ಬೆಳಗ್ಗೆ 11.30ಕ್ಕೆ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಉದ್ಘಾಟನೆ ಕಾರ್ಯಕ್ರಮ ಸಮಾರಂಭ ಇತ್ತು. ಹೊಳೆನರಸೀಪುರ ಕ್ಷೇತ್ರದಿಂದ ಜನತಾಪಕ್ಷದಿಂದ ಆಯ್ಕೆಯಾಗಿದ್ದ ಹೆಚ್.ಡಿ. ದೇವೇಗೌಡರು ಸರ್ಕಾರಿ ಶಿಷ್ಠಾಚಾರದ ಪ್ರಕಾರ ಸಭೆಯ ಅಧ್ಯಕ್ಷತೆ ವಹಿಸಬೇಕಾಗಿತ್ತು. ಆದರೆ, ಆಹ್ವಾನ ಪತ್ರಿಕೆಯಲ್ಲಿ ಗೌಡರ ಹೆಸರನ್ನು ಪ್ರಿಂಟ್ ಹಾಕಿಸಿರಲಿಲ್ಲ. ಇದು ಅಲ್ಲಿನ ಜನರಲ್ಲಿ ಆಕ್ರೋಶ ಉಂಟು ಮಾಡಿತ್ತು.

ಗೌಡರು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ತಿಳಿದು ಸಭೆಯಲ್ಲಿ ಇದ್ದ ಜನರು ಕಲ್ಲು ತೂರಾಟ ನಡೆಸಿದರು. ಪರಿಣಾಮ ಪೊಲೀಸರಿಗೆ ಗಾಯಗಳಾದವು. ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಾಲ್ ಅನ್ನು ಕಿತ್ತೆಸಲಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಪೊಲೀಸರು ಟಿಯರ್ ಗ್ಯಾಸ್ ಸ್ಫೋಟಿಸಿದರು. ಅದಕ್ಕೂ ಜನ ಬಗ್ಗಲಿಲ್ಲ. ಕೊನೆಗೆ ಗೋಲಿಬಾರ್ ಮಾಡಲಾಯಿತು. ಇದರಿಂದ ಇಬ್ಬರು ರೈತರು ಸಾವಿಗೀಡಾಗಿದ್ದರು ಹಾಗೂ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Last Updated : Apr 29, 2022, 4:12 PM IST

For All Latest Updates

TAGGED:

ABOUT THE AUTHOR

...view details