ಸಕಲೇಶಪುರ (ಹಾಸನ): ಪಟ್ಟಣದ ಅಗ್ರಹಾರ ಹಾಗೂ ಕುಡುಗರಹಳ್ಳಿ ಬಡಾವಣೆಯ ಪಡಿತರ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಅಕ್ಕಿ ಹಾಗೂ ಗೋಧಿಯನ್ನು ಎಚ್.ಕೆ.ಕುಮಾರಸ್ವಾಮಿ ಅವರು ವಿತರಿಸಿದರು.
2 ತಿಂಗಳ ಪಡಿತರ ವಿತರಿಸಿದ ಶಾಸಕ ಎಚ್.ಕೆ.ಕುಮಾರಸ್ವಾಮಿ - ration Distribution of lockdown effect
ಲಾಕ್ಡೌನ್ ಹಿನ್ನೆಲೆಯಲ್ಲಿ ಹಾಸನದ ಸಕಲೇಶಪುರ ತಾಲೂಕಿನ ಅಗ್ರಹಾರ ಮತ್ತು ಕುಡುಗರಹಳ್ಳಿ ಬಡಾವಣೆಗಳ ಜನರಿಗೆ ಎರಡು ತಿಂಗಳ ಪಡಿತರ ವಿತರಣೆ ಮಾಡಲಾಯಿತು.
ಸರ್ಕಾರ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ ನೀಡಿದೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಲಾಕ್ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಅನಾನುಕೂಲ ಆಗಬಾರದೆಂಬ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಗುಣಮಟ್ಟ ಅಕ್ಕಿ ಹಾಗೂ ಗೋಧಿಯನ್ನು ಸಾರ್ವಜನಿಕರಿಗಾಗಿ ವಿತರಿಸುತ್ತಿದೆ ಎಂದರು.
ಲಾಕ್ಡೌನ್ಗೆ ಸಹಕಾರ ನೀಡದಿದ್ದರೆ ಅದನ್ನು ಮತ್ತೆ ಮುಂದುವರೆಸಬೇಕಾಗುತ್ತದೆ. ಹೀಗಾಗಿ ಎಲ್ಲರೂ ಲಾಕ್ಡೌನ್ಗೆ ಬೆಂಬಲ ನೀಡಬೇಕು. ಪಡಿತರದ ಜೊತೆಗೆ ಹಾಲನ್ನು ನೀಡಲಾಗುತ್ತಿದೆ. ಒಂದೆರಡು ಬಡಾವಣೆಗಳಲ್ಲಿ ಮಾತ್ರವಲ್ಲದೇ, ಎಲ್ಲ ಬಡಾವಣೆಗಳ ಬಡವರಿಗೂ ಹಾಲು ಹಂಚಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.