ಹಾಸನ:ನಿಶ್ಚಯ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಜಿಲ್ಲೆಯ ಕೊಣನೂರು ಗ್ರಾಮದಲ್ಲಿ ನಡೆದಿದೆ.
ಕೊಣನೂರು ಸಮೀಪದ ರಾಮನ ಕೊಪ್ಪಲು ಗ್ರಾಮದ ಅಪ್ರಾಪ್ತೆಯೊಂದಿಗೆ ಕಡಲೂರು ಗ್ರಾಮದ ದಿನೇಶ್ ಎಂಬಾತನಿಗೆ ನಿಶ್ಚಿತಾರ್ಥ ಮಾಡಲಾಗಿತ್ತು. ಹುಡುಗಿಗೆ 18 ವರ್ಷ ತುಂಬಲು ಇನ್ನೂ 6 ತಿಂಗಳು ಕಾಯಬೇಕಾಗಿತ್ತು. ನಿಶ್ಚಿತಾರ್ಥವಾದ ನಂತರ ದಿನೇಶ್ ಆಕೆಯ ಮನೆಗೆ ಬಂದು ಹೋಗುತ್ತಿದ್ದನಂತೆ. ಅಂತೆಯೇ ಆಕೆಯೂ ಕೂಡಾ ದಿನೇಶ್ ಮನೆಗೆ ಬರುತ್ತಿದ್ದಳು.
ಒಂದು ದಿನ ಬಾಲಕಿ ದಿನೇಶ್ ಮನೆಗೆ ಬಂದಿದ್ದು, ದಿನೇಶ್ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಚಾರವನ್ನು ಪೋಷಕರಿಗೆ ತಿಳಿಸುವುದಾಗಿ ಹೇಳಿದಾಗ ಆಕೆ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಿಂಬಿಸಲು ಯತ್ನಿಸಿದ್ದಾನೆ.