ಕರ್ನಾಟಕ

karnataka

ETV Bharat / state

ಅಪ್ರಾಪ್ತೆ ಮೇಲೆ ಅತ್ಯಾಚಾರ-ಆತ್ಮಹತ್ಯೆ ಪ್ರಕರಣ: ಆರೋಪಿಯ ಬಂಧನ - rape accused arrestered

ಈ ಮೊದಲು 16 ವರ್ಷದ ಮಗಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆಂದು ಬಾಲಕಿ ತಂದೆ-ತಾಯಿ ಆರೋಪಿಸಿದ್ದರು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

rape-accused-arrested-in-hasan
ಅಪ್ರಾಪ್ತೆ ಅತ್ಯಾಚಾರ ಪ್ರಕರಣ: ಆರೋಪಿ ಬಂಧಿಸಿದ ಪೊಲೀಸರು

By

Published : Feb 2, 2021, 3:41 PM IST

ಹಾಸನ: ಅಪ್ರಾಪ್ತೆಯನ್ನು ಪ್ರೀತಿಸಿ ಬಳಿಕ ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಆತ್ಮಹತ್ಯೆಗೆ ಕಾರಣವಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೊಳೆನರಸೀಪುರದ ಕೆರಗೋಡು ಗ್ರಾಮದ ಯೋಗೇಶ್ (24) ಅದೇ ತಾಲೂಕಿನ ಬಾಲಕಿಯನ್ನು ಪ್ರೀತಿಸುತ್ತಿದ್ದ. ಜ. 26ರಂದು ಅಪ್ರಾಪ್ತೆಯನ್ನು ಪುಸಲಾಯಿಸಿ ಮನೆಯಿಂದ ಹೊರಗೆ ಕರೆಸಿಕೊಂಡು ಬಳಿಕ ಆಕೆಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ದ. ಬಳಿಕ ಮದುವೆ ಆಗುವಂತೆ ಬಾಲಕಿ ಒತ್ತಾಯಿಸಿದ್ದಕ್ಕೆ ಈಗಲೇ ಮದುವೆ ಬೇಡ ಎಂದಿದ್ದನಂತೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ

ಆದರೆ ಈ ವಿಚಾರ ಮನೆಯವರಿಗೆ ತಿಳಿದರೆ ನನ್ನನ್ನು ಸಾಯಿಸಬಹುದು ಎಂಬ ಆತಂಕದಿಂದ ಸ್ನೇಹಿತೆ ಮನೆಗೆ ಹೋಗುತ್ತೇನೆ ಎಂದು ಹೇಳಿ ಗ್ರಾಮದ ಸಮೀಪವಿರುವ ಅಂಕವಳ್ಳಿ ಕೆರೆಗೆ ಹಾರಿ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಸದ್ಯ ಆರೋಪಿ ಯೋಗೇಶ್​​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ:ನನಗೂ ಪ್ರಜ್ವಲ್​ಗೂ ಜನರೇಷನ್ ಗ್ಯಾಪ್ ಇದೆ: ಶಾಸಕ ಪ್ರೀತಂ ಜೆ.ಗೌಡ

ABOUT THE AUTHOR

...view details