ಕರ್ನಾಟಕ

karnataka

ETV Bharat / state

ರ‍್ಯಾಪ್​ ಸಾಂಗ್​ ಹಾಡಿ ಮತದಾನ ಜಾಗೃತಿ ಮೂಡಿಸಿದ ಚಂದನ್​ ಶೆಟ್ಟಿ - undefined

ಹಾಸನದಲ್ಲಿ ಬಿಗ್​ಬಾಸ್ ​ಖ್ಯಾತಿಯ ರ‍್ಯಾಪರ್​ ಚಂದನ್​ ಶೆಟ್ಟಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅರಿವು ಮೂಡಿಸಿದರು

ರ‍್ಯಾಪರ್​ ಚಂದನ್​ ಶೆಟ್ಟಿರಿಂದ ಮತದಾನ ಜಾಗೃತಿ

By

Published : Apr 11, 2019, 5:21 AM IST

ಹಾಸನ:ರಾಜಕೀಯ ಇಷ್ಟೇ ಎಂದು ತಾತ್ಸಾರ ಮಾಡದೆ, ಜನರು ಉತ್ತಮರನ್ನು ಆಯ್ಕೆ ಮಾಡಬೇಕು ಎಂದು ಬಿಗ್​ಬಾಸ್ ​ಖ್ಯಾತಿಯ ರ‍್ಯಾಪರ್​ ಚಂದನ್​ ಶೆಟ್ಟಿ ಮತದಾನದ ಕುರಿತು ಜಾಗೃತಿ ಮೂಡಿಸಿದರು.

ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದೊಂದಿಗೆ ‌ ಮಾತನಾಡಿ ಅವರು, ನೋಟಾ ಆಯ್ಕೆ ಮಾಡಿಕೊಳ್ಳುವುದು ಜನರ ವೈಯಕ್ತಿಕ ವಿಚಾರ .‌ ಆದರೂ ನಮ್ಮಲ್ಲಿ ಉತ್ತಮ ನಾಯಕರಿದ್ದಾರೆ. ಅವರು ಯಾರೆಂದು ಹುಡುಕಿ, ಗೆಲ್ಲಿಸಬೇಕು ಎಂದರು.

ರ‍್ಯಾಪರ್​ ಚಂದನ್​ ಶೆಟ್ಟಿರಿಂದ ಮತದಾನ ಜಾಗೃತಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಮಹಿಳೆಯರು ಜಾಗೃತರಾದರೆ ಇಡೀ ಸಮಾಜ ಜಾಗೃತವಾಗುತ್ತೆ. ನಾವು ಮತ್ತಷ್ಟು ಜಾಗತಿಕ ಮಟ್ಟಕ್ಕೆ ತಲುಪಬೇಕಾದರೆ ನಮ್ಮ ದೇಶದ ಭವಿಷ್ಯ ಸುಭದ್ರವಾಗಿರಬೇಕು. ಅದಕ್ಕಾಗಿ ಮೊದಲಿಗೆ ನಮ್ಮ ದೇಶವನ್ನು ಕಾಪಾಡೋಣ, ಮತದಾನ ನಮ್ಮ ಕರ್ತವ್ಯ ಎಂದು ಭಾವಿಸಿ ನಿರ್ವಹಿಸೋಣ ಎಂದರು.

ಕಾರ್ಯಕ್ರಮದಲ್ಲಿ ರ‍್ಯಾಪ್ ಗಾಯನದ ಮೂಲಕ ನೆರೆದಿದ್ದವರನ್ನು ರಂಜಿಸಿದರು.

For All Latest Updates

TAGGED:

ABOUT THE AUTHOR

...view details