ಹಾಸನ: "ದೇವೇಗೌಡರ ಕಾಲಿನ ಧೂಳಿಗೂ ಸಮಾನವಿಲ್ಲ. ಅವನೊಬ್ಬ ದೊಡ್ಡ ದಂಧೆಕೋರ. ದೊಡ್ಡ ಕಳ್ಳ. ಅವನ ಬಗ್ಗೆ ನಾನು ಏನು ಮಾತನಾಡಲಿ. ಅವನು ಹೀಗೆ ಮಾತನಾಡಿದ್ರೆ ಸಂತೆಯಲ್ಲಿ ಹುಚ್ಚು ನಾಯಿಗೆ ಹೊಡೆದಂಗೆ ಹೊಡೀತಾರೆ. ಹಾಗಾಗಿಯೇ ಜನರು ಅವನನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ" ಎಂದು ಸಂಸದ ಪ್ರಜ್ವಲ್ ರೇವಣ್ಣ ಮಾಜಿ ಶಾಸಕ ಕೆ.ಎನ್.ರಾಜಣ್ಣಗೆ ಏಕವಚನದಲ್ಲಿಯೇ ಹರಿಹಾಯ್ದರು. ದಿಶಾ ಸಭೆ ಮುಗಿದ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ದೇವೇಗೌಡರ ಕಾಲಿನ ಧೂಳಿನ ಸಮ ಇಲ್ಲ ರಾಜಣ್ಣ: ಸಂಸದ ಪ್ರಜ್ವಲ್ ರೇವಣ್ಣ - ಸಂಸದ ಪ್ರಜ್ವಲ್ ರೇವಣ್ಣ
ಇಂದು ಬೆಳಗ್ಗೆ ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೆ.ಎನ್.ರಾಜಣ್ಣ, ದೇವೇಗೌಡರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೆ. ನಾಲ್ವರ ಮೇಲೆ ಹೋಗೋದು ಹತ್ತಿರದಲ್ಲೇ ಇದೇ ಎಂದು ವ್ಯಂಗ್ಯವಾಡಿದ್ದರು.
ಸಂಸದ ಪ್ರಜ್ವಲ್ ರೇವಣ್ಣ