ಹಾಸನ: ಹಾಸನದಲ್ಲಿ ಮುಂಜಾನೆಯಿಂದಲೇ ನೆತ್ತಿಯ ಮೇಲೆ ರಣರಣ ಬಿಸಿಲು ತಾಂಡವವಾಡುತ್ತಿತ್ತು.ಆದರೆ ಬಿಸಿಲಿನ ನಡುವೆ ಹಠಾತನೆ ಸುರಿದ ಮಳೆ ಇಳೆಯನ್ನ ತಂಪಾಗಿಸಿದೆ.
ಮಳೆಯ ಜೊತೆಗೆ ಸ್ವಲ್ಪ ಬಿರುಗಾಳಿ ಬಂದಿದ್ದರಿಂದ ಸ್ವಲ್ಪ ಹೊತ್ತು ಮಳೆ ಜೋರಾಗಿ ಸುರಿಯಿತು. ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಮಳೆರಾಯ ಇಂದು ದಿಢೀರ್ ಎಂಟ್ರಿ ಕೊಟ್ಟಿದ್ದು, ರಾಗಿ ಭತ್ತ ಮತ್ತು ದ್ವಿದಳ ಧಾನ್ಯಗಳಿಗೆ ಉತ್ತಮವಾದಂತಾಗಿದೆ. ಹೀಗಾಗಿ ರೈತರು ಸ್ವಲ್ಪ ಖುಷಿಯಾಗಿದ್ದಾರೆ. ಹಾಸನ ಹೊರತುಪಡಿಸಿ ಬೇರೆ ಯಾವ ತಾಲೂಕುಗಳಲ್ಲಿ ಕೂಡ ಮಳೆ ಬಂದಿಲ್ಲ.ಆದರೆ ಹಾಸನದಲ್ಲಿ ದಿಢೀರನೆ ಮಳೆ ಬಂದಿದ್ದರಿಂದ ಕೆಲಕಾಲ ಸಾರ್ವಜನಿಕರು ,ವಾಹನ ಸವಾರರು ಪರದಾಡುವಂತಾಯ್ತು.ಇನ್ನೂ ಅಕ್ಟೋಬರ್ 4 ರ ತನಕ ಸುರಿದ ಹಾಸನ ಜಿಲ್ಲೆಯಲ್ಲಿನ ಮಳೆಯ ವರದಿಯನ್ನು ನೋಡುವುದಾದರೆ, ಹಾಸನ ತಾಲೂಕಿನ ಸಾಲಗಾಮೆ 2.2 ಮಿಮೀ. ಮಳೆಯಾಗಿದೆ. ಸಕಲೇಶಪುರ ತಾಲೂಕಿನ ಮಾರನಹಳ್ಳಿಯಲ್ಲಿ 7.2 ಮಿ.ಮೀ., ಹೆತ್ತೂರು 3.6 ಮಿ.ಮೀ, ಸಕಲೇಶಪುರ 0.2 ಮಿ.ಮೀ., ಹಾನುಬಾಳು 1 ಮಿ.ಮೀ.ಮಳೆಯಾಗಿದೆ. ಅರಸೀಕೆರೆ ತಾಲೂಕಿನ ಗಂಡಸಿ 1ಮಿ.ಮೀ., ಜಾವಗಲ್ 9 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಕಸಬಾ 0.2 ಮಿ.ಮೀ., ನುಗ್ಗೆಹಳ್ಳಿ 2.2 ಮಿ.ಮೀ., ಮಳೆಯಾಗಿದೆ. ಬೇಲೂರು ತಾಲೂಕಿನ ಹಳೇಬೀಡು 5.6 ಮಿ.ಮೀ. ಮಳೆಯಾಗಿದೆ.