ಕರ್ನಾಟಕ

karnataka

ETV Bharat / state

ಪ್ರತಿಯೊಬ್ಬರೂ ಆತ್ಮಕಲ್ಯಾಣ ಮಾಡಿಕೊಂಡು ಧರ್ಮ ಸೇವೆ ಮಾಡಬೇಕು:  ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಸಮಾಜದ ಸಲಹೆ- ಸಹಕಾರ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಪ್ರಾಚೀನ ಪರಂಪರೆ ಉಳಿಸಲು ಸಾಧ್ಯವಾದಷ್ಟು ಶ್ರಮಿಸುತ್ತಿದ್ದೇವೆ. ದೀಕ್ಷೆ ಪಡೆದಿದ್ದು ಆತ್ಮಕಲ್ಯಾಣಕ್ಕಾಗಿ. ಆದರೆ, ಧರ್ಮಕಾರ್ಯ ಮಾಡುವುದು ಸಮಾಜಕ್ಕಾಗಿ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಸ್ವಾಮೀಜಿ

By

Published : Apr 20, 2019, 3:41 PM IST

ಶ್ರವಣಬೆಳಗೊಳ: ಪಟ್ಟಾಭಿಷೇಕ ಎನ್ನುವುದು ವೈಭವವಲ್ಲ, ಇದು ನಮ್ಮ ನಿಷ್ಠೆ. ಪಟ್ಟಾಭಿಷೇಕ ಎಂಬುದು ಪರಂಪರೆ ಉಳಿಸಿ-ಬೆಳೆಸಿ, ತೀರ್ಥಂಕರರು ತೋರಿಸಿದ ಮಾರ್ಗ, ಭಗವಾನ್ ಬಾಹುಬಲಿ ಆಚರಿಸಿದ ಜೀವನ ಕ್ರಮ, ಭದ್ರಬಾಹು ಮುನಿಗಳ ಮಾರ್ಗದಲ್ಲಿ ಮುನ್ನಡೆಯಲು ಮಾಡಿಕೊಂಡು ಸಂಕಲ್ಪ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಶ್ರವಣಬೆಳಗೋಳದ ಜೈನ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ 50ನೇ ಪಟ್ಟಾಭಿಷೇಕ ಪೀಠಾರೋಹಣ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಸಮಾಜದ ಸಲಹೆ - ಸಹಕಾರ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಪ್ರಾಚೀನ ಪರಂಪರೆ ಉಳಿಸಲು ಸಾಧ್ಯವಾದಷ್ಟು ಶ್ರಮಿಸುತ್ತಿದ್ದೇವೆ. ದೀಕ್ಷೆ ಪಡೆದಿದ್ದು ಆತ್ಮ ಕಲ್ಯಾಣಕ್ಕಾಗಿ. ಆದರೆ, ಧರ್ಮಕಾರ್ಯ ಮಾಡುವುದು ಸಮಾಜಕ್ಕಾಗಿ. ಪ್ರತಿಯೊಬ್ಬರೂ ಆತ್ಮಕಲ್ಯಾಣ ಮಾಡಿಕೊಂಡು ಧರ್ಮ ಸೇವೆ ಮಾಡಬೇಕು. ಮಠ ಮಾನ್ಯಗಳಿರುವುದು ಸಮಾಜಕ್ಕಾಗಿ, ಸಮಾಜವನ್ನು ಬಿಟ್ಟು ಸ್ವಾಮೀಜಿಯವರು ಏನೂ ಮಾಡಲಾಗುವುದಿಲ್ಲ ಎಂದು ತಿಳಿಸಿದರು.

ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಭಾರತೀಯ ಸಂಸ್ಕತಿ ಉಳಿಯಬೇಕು. ಪ್ರಾಚೀನವಾದ ಮಹಾಪುರುಷರು ಉತ್ತಮ ತ್ಯಾಗದಿಂದ ಹೇಗೆ ನಡೆದಿದ್ದಾರೋ ಹಾಗೇ ನಾವೂ ಮುನ್ನಡೆಯಬೇಕು. ಎಲ್ಲ ಮಠದ ಸ್ವಾಮೀಜಿಯವರು ಉತ್ತಮ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ನಮಗೆ ಬೆಂಬಲವಾಗಿದ್ದಾರೆ. ನಮ್ಮ 50 ವರ್ಷಗಳ ಎಲ್ಲಾ ಕಾರ್ಯಗಳಲ್ಲೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು, ನಾಗರಿಕರು, ದೇಶ, ವಿದೇಶಗಳಲ್ಲಿರುವ ಶ್ರಾವಕರು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.

ABOUT THE AUTHOR

...view details