ಹಾಸನ:ಆಸ್ತಿ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ಉಂಟಾಗಿ ಸ್ವಂತ ಚಿಕ್ಕಪ್ಪನನ್ನ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ನಡೆದಿದೆ.
ಪುಟ್ಟಸ್ವಾಮಯ್ಯ (59) ಕೊಲೆಯಾದ ವ್ಯಕ್ತಿ, ಯೋಗನರಸಿಂಹ (34) ಕೊಲೆ ಮಾಡಿದ ಆರೋಪಿ. ಕೊಲೆಯಾದ ವ್ಯಕ್ತಿ ಜಿಲ್ಲೆಯ ಹೊಳೆನರಸೀಪುರದ ಕೋಡಿಹಳ್ಳಿ ಗ್ರಾಮದ ಮಾಜಿ ಸೈನಿಕ ಎನ್ನಲಾಗಿದೆ. ಆಸ್ತಿಯ ವಿಚಾರದಲ್ಲಿ ಮೊದಲಿನಿಂದಲೂ ಎರಡು ಕುಟುಂಬಗಳ ನಡುವೆ ಜಳಗವಾಗುತ್ತಿತ್ತು. ಆ ಜಗಳ ವಿಕೋಪಕ್ಕೆ ತಿರುಗಿ ಕೈ-ಕೈ ಮಿಲಾಯಿಸುವ ಹಂತ ತಲುಪಿತ್ತು. ಬಳಿಕ ಗ್ರಾಮಸ್ಥರು ಸೇರಿ ಪಂಚಾಯ್ತಿಯಲ್ಲಿ ತೀರ್ಮಾನ ಮಾಡೋಣ ಎಂದಿದ್ದರು.
ನೆನ್ನೆ ಪಂಚಾಯ್ತಿ ಕಟ್ಟೆಯಲ್ಲಿ ಮಾತಿಗೆ ಮಾತು ಬೆಳೆದು ದಾಯಾದಿಗಳ ನಡುವೆ ಮತ್ತೆ ಜಗಳ ಶುರುವಾಗಿದೆ. ಈ ವೇಳೆ ಕುಪಿತಗೊಂಡ ಆರೋಪಿ ಯೋಗನರಸಿಂಹ ಏಕಾ ಏಕಿ ಪುಟ್ಟಸ್ವಾಮಯ್ಯನ ಮರ್ಮಾಂಗಕ್ಕೆ ಹಲ್ಲೆ ಮಾಡಿದ್ದರಿಂದ ಸ್ಥಳಲ್ಲಿಯೇ ಅವರು ಕುಸಿದು ಬಿದ್ದಿದ್ದು, ಹೆಚ್ಚಿನ ಚಿಕಿತ್ಸೆಗೆ ಹೊಳೆನರಸೀಪುರಕ್ಕೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಇನ್ನು ಕಳೆದ 5-6 ವರ್ಷಗಳಿಂದ ಜಮೀನು ವಿವಾದದಲ್ಲಿ ದಾಯಾದಿಗಳಿಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗಲೇ ಆಗಿದ್ದಾಗ್ಗೆ ಜಗಳ ನಡೆಯುತ್ತಿದ್ದವು. ನೆನ್ನೆ ಸಂಜೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ ಇನ್ನು ಈ ಸಂಬಂಧ ಹೊಳೆನರಸೀಫುರ ನಗರ ಠಾಣೆಯ ಪೊಲೀಸರು 7 ಮಂದಿಯ ಮೇಲೆ ಪ್ರಕರಣ ದಾಖಲಿಸಿ, ಸದ್ಯ ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.