ಹಾಸನ:ಜಿಲ್ಲೆಯಲ್ಲಿ ನಡೆದ ಪುಷ್ಪಗಿರಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯೋಜನೆಗಳು ಹಾಗೂ ಪುಷ್ಪಗಿರಿ ಸ್ವಾಮೀಜಿಯವರ ಸಾಮಾಜಿಕ ಕಳಕಳಿಯನ್ನು ಕೊಂಡಾಡಿದರು.
ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡ ಬಳಿಕ ರಣಘಟ್ಟ ಯೋಜನೆಗೆ ನೂರು ಕೋಟಿ ಬಿಡುಗಡೆ ಮಾಡಿ ನೀರಾವರಿ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಕುಮಾರಸ್ವಾಮಿ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನನವನ್ನ ಬಳಸಿ ಯೋಜನೆಗೆ ಚಾಲನೆ ನೀಡಬೇಕು ಎಂದು ಶಾಸಕ ಕೆ.ಎಸ್ ಲಿಂಗೇಶ್ ಮನವಿ ಮಾಡಿದರು. ಜೊತೆಗೆ ತಾಲೂಕಿಗೆ 670 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಎಂದರೆ ಅದು ಕುಮಾರಸ್ವಾಮಿ ಮಾತ್ರ ಅಂತ ಕೊಂಡಾಡಿದರು.
ಪುಷ್ಪಗಿರಿಯ ಸ್ವಾಮೀಜಿ ಚಿಕ್ಕವಯಸ್ಸಿನಲ್ಲಿಯೇ ಬಡವರ ಜವಾಬ್ದಾರಿ ತೆಗೆದುಕೊಂಡು ಅವರೆಲ್ಲ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕವಾಗಿ ನೆಲೆ ಕಂಡುಕೊಳ್ಳುವಂತೆ ಮಾಡುವುದರಲ್ಲಿ ಸಫಲತೆ ಕಂಡಿದ್ದಾರೆ. ಕೆರೆ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಭಕ್ತರು ಕೊಟ್ಟಂತಹ ಆರ್ಥಿಕ ಸಹಾಯವನ್ನು ರೈತರಿಗೆ ಅರ್ಪಣೆ ಮಾಡುತ್ತಿರುವ ಏಕೈಕ ಸ್ವಾಮೀಜಿ ಎಂದರೆ ಅದು ಪುಷ್ಪಗಿರಿ ಸ್ವಾಮೀಜಿ ಎಂದರು.
ದೇಹದ ಕೊಳೆ ತೆಗೆಯೋದಕ್ಕೆ ಸ್ನಾನ ಮಾಡುತ್ತೇವೆ ಮನಸ್ಸಿನ ಕೊಳೆ ತೆಗೆಯಲು ಸತ್ಸಂಗ ಅಗತ್ಯವಾಗಿ ಬೇಕಾಗುತ್ತದೆ. ಆಧ್ಯಾತ್ಮಿಕ ಜೀವನ ಒಂದು ಸಾಹಸ ಯಾತ್ರೆ. ಅಂತಹ ಆಧ್ಯಾತ್ಮಿಕ ಜೀವನವನ್ನು ಕಾಪಾಡಿಕೊಂಡು ಪುಷ್ಪಗಿರಿ ಮಠವನ್ನು ಅಭಿವೃದ್ಧಿಪಡಿಸಿದ ಮಠಾಧೀಶರಲ್ಲಿ ಸೋಮಶೇಖರ ಸ್ವಾಮೀಜಿ ಒಬ್ಬರು ಎಂದು ಎ.ಟಿ. ರಾಮಸ್ವಾಮಿ ಮೆಚ್ಚುಗೆ ಮಾತುಗಳನ್ನಾಡಿದರು.