ಹಾಸನ: ಬೆಂಬಲ ಬೆಲೆಯೊಂದಿಗೆ ರಾಗಿ ಖರೀದಿ ಮತ್ತು ದಾಸ್ತಾನು ಕುರಿತು ಇರುವ ಸಣ್ಣ ತೊಡಕುಗಳನ್ನು ಬಗೆಹರಿಸಿ ಎರಡು ಮೂರು ದಿನದೊಳಗೆ ಖರೀದಿ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಬೆಂಬಲ ಬೆಲೆಯೊಂದಿಗೆ ರಾಗಿ ಖರೀದಿಸಿ: ಅಧಿಕಾರಿಗಳಿಗೆ ಹಾಸನ ಡಿ.ಸಿ ಸೂಚನೆ
ಬೆಂಬಲ ಬೆಲೆಯೊಂದಿಗೆ ರಾಗಿ ಖರೀದಿ ಮತ್ತು ದಾಸ್ತಾನು ಕುರಿತು ಇರುವ ಸಣ್ಣ ತೊಡಕುಗಳನ್ನು ಬಗೆಹರಿಸಿ ಎರಡು ಮೂರು ದಿನದೊಳಗೆ ಖರೀದಿ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, 13,017 ರೈತರಲ್ಲಿ 9,025 ರೈತರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಉಳಿದಿರುವ ರೈತರ ನೋಂದಣಿಯನ್ನು ಪೂರ್ಣಗೊಳಿಸಿ ಖರೀದಿ ಪ್ರಾರಂಭಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಕೃಷಿ ಮತ್ತು ಎ.ಪಿ.ಎಂ.ಸಿ ಅಧಿಕಾರಿಗಳಿಗೆ ಸೂಚಿಸಿದರು. ಚನ್ನರಾಯಪಟ್ಟಣ ತಾಲೂಕಿನಲ್ಲಿ ಖರೀದಿಸಿದ ಧಾನ್ಯಗಳನ್ನು ಶೇಖರಿಸಲು ಉಗ್ರಾಣ ವ್ಯವಸ್ಥೆ ಇಲ್ಲ. ಹೀಗಾಗಿ ಮಾರ್ಕೆಟಿಂಗ್ ಫೆಡರೇಷನ್ ಗೋಡೋನ್‍ನಲ್ಲಿ ದಾಸ್ತಾನು ಮಾಡುವಂತೆ ತಿಳಿಸಿದರು.
ಇನ್ನೂ ರಾಜ್ಯಾದ್ಯಂತ ಮಾರ್ಚ್ 4ರಿಂದ 23 ರವರೆಗೆ ನಡೆಯಲಿರುವ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ಕೊಡದಂತೆ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಅಧಿಕಾರಿಗಳು ಮುಂಜಾಗೃತೆ ವಹಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚಿಸಿದ್ದಾರೆ.