ಕರ್ನಾಟಕ

karnataka

ETV Bharat / state

ಹೆದ್ದಾರಿ ಅಭಿವೃದ್ಧಿಗೆ ಅಕ್ರಮವಾಗಿ ಭೂಸ್ವಾಧೀನ ಆರೋಪ: ಪರಿಹಾರಕ್ಕೆ ರೈತರ ಆಗ್ರಹ - ಹೆದ್ದಾರಿಯ ಅಭಿಯಂತರರುಗಳು ಅವರಿಗೆ ಮನಸೋ ಇಚ್ಛೆ

ಹಾಸನ ಜಿಲ್ಲೆಯಲ್ಲಿ ಬೇಲೂರು-ಬಿಳಿಕೆರೆ ರಾಷ್ಟ್ರೀಯ ಹೆದ್ದಾರಿ-373ನ್ನು ಅಭಿವೃದ್ಧಿಪಡಿಸಲು ಜಮೀನನ್ನು ಯಾವುದೇ ಮುನ್ಸೂಚನೆ ನೀಡದೆ ಅನಧಿಕೃತವಾಗಿ, ಅಕ್ರಮವಾಗಿ ಭೂ ಸ್ವಾಧೀನ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ರೈತರು ದೂರಿದರು.

Protests by Farmers' Union demanding compensation land acquisition
ಅಕ್ರಮವಾಗಿ ಭೂಸ್ವಾಧೀನ, ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

By

Published : Jun 13, 2020, 2:05 AM IST

ಹಾಸನ:ಹೊಳೆನರಸೀಪುರಕ್ಕೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗೆ ಯಾವುದೇ ಮುನ್ಸೂಚನೆ ನೀಡದೆ ಅಕ್ರಮವಾಗಿ ಭೂಸ್ವಾಧೀನ ಮಾಡಿಕೊಳ್ಳುತ್ತಿದ್ದು, ಕೂಡಲೇ ರೈತರಿಗೆ ಸೂಕ್ತ ಪರಿಹಾರ ನೀಡಿ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.

ಹಾಸನ ಜಿಲ್ಲೆಯಲ್ಲಿ ಬೇಲೂರು-ಬಿಳಿಕೆರೆ ರಾಷ್ಟ್ರೀಯ ಹೆದ್ದಾರಿ-373ನ್ನು ಅಭಿವೃದ್ಧಿಪಡಿಸಲು ರೈತರ ಜಮೀನನ್ನು ಯಾವುದೇ ಮುನ್ಸೂಚನೆ ನೀಡದೆ ಅನಧಿಕೃತವಾಗಿ, ಅಕ್ರಮವಾಗಿ ಭೂ ಸ್ವಾಧೀನ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಇದರ ಬಗ್ಗೆ ಹೆದ್ದಾರಿಯ ಅಭಿಯಂತರರುಗಳು ಅವರಿಗೆ ಮನಸೋ ಇಚ್ಛೆ ಬರೆದುಕೊಂಡು ಬಂದಿರುವ ಮುಚ್ಚಳಿಕೆಗೆ ರೈತರಿಂದ ಬಲವಂತವಾಗಿ ಸಹಿ ಮಾಡಿಸಿಕೊಳ್ಳಲು ಒತ್ತಾಯಿಸಿದ್ದಾರೆ. ಈ ಭಾಗದ ಎಲ್ಲಾ ರೈತರಿಗೆ ಪರಿಹಾರ ನೀಡದೇ ದಬ್ಬಾಳಿಕೆ ಮಾಡಿ ಕಾಮಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ ರೈತು ಮೊದಲು ಜಮೀನಿನ ಪರಿಹಾರ ನೀಡಿ, ಬಳಿಕ ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ABOUT THE AUTHOR

...view details