ಹಾಸನ:ಬಿಜೆಪಿ ಸರ್ಕಾರದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸ್ವಾವಲಂಬನೆ ವಿರೋಧಿ ಸುಗ್ರೀವಾಜ್ಞೆಗಳನ್ನು ಹಿಂಪಡೆಯಲು ಆಗ್ರಹಿಸಿ ರಾಜ್ಯ ರೈತ ಸಂಘ ಸೇರಿ ವಿವಿಧ ಸಂಘಟನೆಗಳಿಂದ ಜಂಟಿಯಾಗಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್ ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿತು. ಭೂ ಸುಧಾರಣಾ ಮತ್ತು ಭೂ ಸ್ವಾಧೀನ ಕಾಯ್ದೆಗಳಿಗೆ ತಿದ್ದುಪಡಿ, ಎಪಿಎಂಸಿ ಕಾಯ್ದೆ, ವಿದ್ಯುಚ್ಛಕ್ತಿ ಖಾಸಗೀಕರಣ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ, ಸರ್ಕಾರಿ ಸಹಕಾರಿ ಸಾರ್ವಜನಿಕ ಉದ್ಯಮಗಳಿಗೆ, ಬ್ಯಾಂಕುಗಳ ಮಾರಾಟ, ಜಿಎಸ್ಟಿ, ಸಿಎಎ, ಎನ್ಆರ್ಎ ರಾಷ್ಟ್ರೀಯ ಶಿಕ್ಷಣ ನೀತಿ ಮೇಲ್ವರ್ಗಕ್ಕೆ ಶೇ.10ರಷ್ಟು ಮೀಸಲಾತಿ, ಕಾರ್ಮಿಕರ ಉದ್ಯೋಗ ನಷ್ಟ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ಗುಂಪು ಥಳಿತ ಹಾಗೂ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿರಾಕರಣೆ, ಕಾರ್ಪೊರೇಟ್ ಉದ್ದಿಮೆದಾರರ ಸಾಲ ಮನ್ನಾ, ಆರ್ಬಿಐನ ಆಪದ್ಧನ ದುರ್ಬಳಕೆ ಜೊತೆಗೆ ಜಾತಿವಾದಿ ಮತ್ತು ಬಂಡವಾಳ ಶಾಹಿ ಹಿತಾಸಕ್ತಿಗಳು ಮೇಲುಗೈ ಪಡೆದಿರುವುದಕ್ಕೆ ಜ್ವಲಂತ ನಿದರ್ಶನಗಳಾಗಿವೆ ಎಂದರು.