ಹಾಸನ: ಬೇಲೂರು ತಾಲೂಕಿನ ಘಟ್ಟದಹಳ್ಳಿ ಗ್ರಾಮದ ಸರ್ವೆ ನಂ. 440ರ ಸರ್ಕಾರಿ ಪಹಣಿಗೆ ನಕಲಿ ದಾಖಲೆ ಸೃಷ್ಠಿ ಮಾಡಿಸಿ ಕಳೆದ 60 ವರ್ಷಗಳಿಂದ ಅನಿಭವದಲ್ಲಿ ಬೆಳೆ ಬೆಳೆಯುತ್ತಿದ್ದರೂ ಪದೆ ಪದೆ ನಾಶ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಬೆಳೆ ನಾಶ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಬೇಲೂರು ತಾಲೂಕು ಹಳೇಬೀಡು ಹೋಬಳಿಯ ಗೋಣಿಸೋಮನಹಳ್ಳಿ ಗ್ರಾಮದ ವಾಸಿ ದೊಡ್ಡಪ್ಪನಾದ ಹುಲ್ಲಿಗೌಡರಿಗೆ ಇನಾಂನಲ್ಲಿ 1962-63 ರಲ್ಲಿ ಭೂಮಿ ಮಂಜೂರು ಆಗಿದೆ. ಈ ಮಧ್ಯೆ 1968ರಲ್ಲಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದು, ಇದಕ್ಕೆ ಸಂಬಂಧಪಟ್ಟ ದಾಖಲೆಗಳು ಇದ್ದು, ಅದರಂತೆ ನಮ್ಮ ದೊಡ್ಡಪ್ಪನ ಮರಣದ ನಂತರ ನಾವುಗಳು ಈ ಭೂಮಿ ಉಳುಮೆ ಮಾಡಿಕೊಂಡು ತೆಂಗು, ರಾಗಿ, ಜೋಳ, ಮೊದಲಾದ ಬೆಳೆಗಳನ್ನು ಬೆಳೆದು ಕೊಂಡು ಬರುತ್ತಿದ್ದಾರೆ ಎಂದರು.
ಆಗಸ್ಟ್ 23 ರಂದು ಗೋಣಿಸೋಮನಹಳ್ಳಿ ಗ್ರಾಮದ ಪ್ರಭಾವಿ ವ್ಯಕ್ತಿ ಹರೀಶ್ ಎಂಬಾತ ನಾವು ಬೆಳೆದ ಬೆಳೆಗಳನ್ನು ಟ್ರಾಕ್ಟರ್ ನಿಂದ ನಾಶ ಮಾಡಿರುವ ಕ್ರಮ ಖಂಡಿಸಿ. ಈ ಪ್ರಕರಣವು ಸಕಲೇಶಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಇರುವುದರಿಂದ ನಮ್ಮ ತಂಟೆಗೆ ಹಾಗೂ ಸ್ವಾಧೀನಕ್ಕೆ ತೊಂದರೆ ನೀಡದಂತೆ ಖಡಕ್ ಆದೇಶ ಮಾಡಿ ಅವರಿಂದ ಮುಚ್ಚಳಿಕೆ ಸಹ ಬರೆಸಲಾಗಿತ್ತು ಎಂದರು.
ಹರೀಶ ದಬ್ಬಾಳಿಕೆಯಿಂದ ಅಲ್ಪಸಂಖ್ಯಾತ ಕುಟುಂಬಕ್ಕೆ ಸೇರಿದ 7 ಕುಟುಂಬಗಳು ಬೀದಿಪಾಲಾಗುವ ಸಂಭವವಿದ್ದು, ಈ ಪ್ರಕರಣವು ನ್ಯಾಯಾಲಯದ ಹಂತದಲ್ಲಿರುವುದರಿಂದ ಯಾವುದೇ ರೀತಿ ಬೆಳೆ ನಾಶ ಮಾಡದಂತೆ ಮತ್ತು ಸ್ವಾಧೀನಕ್ಕೆ ತೊಂದರೆ ಕೊಡದಂತೆ ಹರೀಶ್ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ರವರಿಗೆ ಮನವಿ ಸಲ್ಲಿಸಲಾಯಿತು.