ಕರ್ನಾಟಕ

karnataka

ETV Bharat / state

ತ್ಯಾಜ್ಯ ವಿಲೇವಾರಿ ಸಮಸ್ಯೆ.. ಟ್ರಾಕ್ಟರ್​ನಲ್ಲಿ ಕಸ ತುಂಬಿಸಿ ಪುರಸಭಾ ಮುಂಭಾಗ ವಿನೂತನ ಪ್ರತಿಭಟನೆ - ವಿನೂತನ ಪ್ರತಿಭಟನೆ

ಈಗಾಗಲೇ ಹೈಕೋರ್ಟ್​ನಿಂದ ಮಳಲಿ ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಮಾಡಲು ಆದೇಶ ಬಂದಿದೆ. ವೈಜ್ಞಾನಿಕ ಪದ್ಧತಿಯನ್ನು ಘಟಕದಲ್ಲಿ ಅಳವಡಿಸಲು ಟೆಂಡರ್ ಕರೆಯಲಾಗಿದೆ..

ವಿನೂತನ ಪ್ರತಿಭಟನೆ
ವಿನೂತನ ಪ್ರತಿಭಟನೆ

By

Published : Oct 2, 2020, 10:46 PM IST

ಸಕಲೇಶಪುರ :ಕಸ ವಿಲೇವಾರಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಕಾರ್ಯಕರ್ತರು ಪಟ್ಟಣದ ಕಸವನ್ನು ಟ್ರ್ಯಾಕ್ಟರ್​ನಲ್ಲಿ ತುಂಬಿಕೊಂಡು ಪುರಸಭಾ ಮುಂಭಾಗ ವಿನೂತನವಾಗಿ ಪ್ರತಿಭಟಿಸಿದರು.

ಕಸ ವಿಲೇವಾರಿ ಸಮಸ್ಯೆ ಬಗೆಹರಿಸದ ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಹೆಚ್ ಕೆ ಕುಮಾರಸ್ವಾಮಿ ಮಾತನಾಡಿ, ಸೋಮವಾರದಿಂದ ಮಳಲಿ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಮಾಡಲು ಕಾಮಗಾರಿ ಆರಂಭಿಸಲಾಗುತ್ತಿದೆ.

ಸ್ವಚ್ಛ ನಗರದ ಕುರಿತು ನಮಗೂ ಸಹ ಹೆಚ್ಚಿನ ಕಾಳಜಿಯಿದೆ. ಕೆಲ ಕಾರಣಗಳಿಂದ ಕಾಮಗಾರಿ ತಡವಾಗಿದೆ. ಇನ್ನು 6 ತಿಂಗಳ ಒಳಗೆ ಮಳಲಿ ಗ್ರಾಮದ ಕಸ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಟ್ರಾಕ್ಟರ್​ನಲ್ಲಿ ಕಸ ತುಂಬಿಸಿ ವಿನೂತನ ಪ್ರತಿಭಟನೆ

ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಮಾತನಾಡಿ, ಈಗಾಗಲೇ ಹೈಕೋರ್ಟ್​ನಿಂದ ಮಳಲಿ ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಮಾಡಲು ಆದೇಶ ಬಂದಿದೆ. ವೈಜ್ಞಾನಿಕ ಪದ್ಧತಿಯನ್ನು ಘಟಕದಲ್ಲಿ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಪಟ್ಟಣ ಸೇರಿ ಗ್ರಾಮಾಂತರ ಪ್ರದೇಶಗಳ ಜನ ರಸ್ತೆ ಬದಿ ಕಸ ಹಾಕುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ABOUT THE AUTHOR

...view details