ಅರಕಲಗೂಡು: ಪಟ್ಟಣದಲ್ಲಿ ಸರ್ಕಾರಿ ಮದ್ಯದ ಅಂಗಡಿ (MSIL) ತೆರೆಯಲು ಆಗ್ರಹಿಸಿ ಮಲ್ಲಿಪಟ್ಟಣ ನಿವಾಸಿಗಳು ಹಾಗೂ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಯಿಂದ ಪ್ರತಿಭಟನೆ ನಡೆಸಿ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಶಶಿಕುಮಾರ್ ಹಲವು ದಶಕಗಳಿಂದ ಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಮದ್ಯದಂಗಡಿ ತೆರಯಲು ಕೆಲವು ಕಾಣದ ಅನಾಮಿಕ ವ್ಯಕ್ತಿಗಳು ಯಶಸ್ಸು ಹೊಂದುತ್ತಿದ್ದಾರೆ, ತಾಲ್ಲೂಕಿನ ಖಾಸಗಿ ಮದ್ಯದಂಗಡಿ ಮಾಲೀಕರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಸರ್ಕಾರಿ ಮದ್ಯದಂಗಡಿ (MSIL) ತೆರೆಯಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣ ಒಂದರಲ್ಲೇ ಮದ್ಯ ಮಾರಾಟದ ದಿನವಹಿ ವಹಿವಾಟು ಸರಾಸರಿ 12 ಲಕ್ಷದಿಂದ 14 ಲಕ್ಷ ವ್ಯಾಪಾರ ವಹಿವಾಟು ನೆಡೆಯುತ್ತದೆ. ಅದರಲ್ಲಿ ಅತಿಹೆಚ್ಚು ದರಕ್ಕೆ ಮಾರಾಟ ಮಾಡುವುದರಿಂದ ಜನತೆ 2 ರಿಂದ 3 ಲಕ್ಷ ಹೆಚ್ಚುವರಿಯಾಗಿ ನಷ್ಟವಾಗುತ್ತಿದೆ ಸರ್ಕಾರಿ MSIL ಮದ್ಯದಂಗಡಿ ಪಟ್ಟಣದಲ್ಲಿ ಪ್ರಾರಂಭಗೊಂಡರೆ ರೈತಾಪಿ ವರ್ಗದವರಿಗೆ ಅನುಕೂಲವಾಗುತ್ತದೆ. ಆದರೆ ಅಬಕಾರಿ ಇಲಾಖೆ ಹಾಗೂ ಖಾಸಗಿ ವ್ಯಕ್ತಿಗಳಿಂದ ಸರ್ಕಾರಿ ಮದ್ಯದಂಗಡಿ ತೆರೆಯದಂತೆ ತಡೆಯಲಾಗುತ್ತಿದೆ ಎಂದು ಪತ್ರಿಭಟನೆಗಾರರು ಆರೋಪಿಸಿದರು.
ಪಟ್ಟಣದಲ್ಲಿ ಸರ್ಕಾರಿ ಮದ್ಯದಂಗಡಿಯನ್ನು ತೆರೆಯಲು ಅನುಮತಿ ನೀಡದೆ ಅಬಕಾರಿ ವಿಳಂಬ ನೀತಿ ಅನುಸರಿಸುತ್ತಿರುವುದು ಈಗ ಮುಂದುವರೆದಿದೆ ಆದರೆ ಸೆಪ್ಟೆಂಬರ್ 10 ತಾರೀಖಿನಂದು ಇಲಾಖೆ ಕಛೇರಿ ಮುಂದೆ ಧರಣಿ ಸತ್ಯಗ್ರಹ ನಡೆಸಲಾಗುವುದು ಎಂದು ತಿಳಿಸಿದರು.