ಕರ್ನಾಟಕ

karnataka

ETV Bharat / state

ದೇಗುಲ ಪ್ರವೇಶಕ್ಕೆ ಆಗ್ರಹಿಸಿ ವಿವಿಧ ದಲಿತ ಸಂಘಟನೆಯ ಮುಖಂಡರಿಂದ ಪ್ರತಿಭಟನೆ - Hassan Protest

ತೇಜೂರು ಗ್ರಾಮದಲ್ಲಿ ವೀರಾಂಜನೇಯ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿವಿಧ ದಲಿತ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

Hassan
ವಿವಿಧ ದಲಿತ ಸಂಘಟನೆಯ ಮುಖಂಡರಿಂದ ಪ್ರತಿಭಟನೆ

By

Published : Sep 2, 2020, 8:17 PM IST

ಹಾಸನ: ತೇಜೂರು ಗ್ರಾಮದಲ್ಲಿ ವೀರಾಂಜನೇಯ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿವಿಧ ದಲಿತ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

​ತೇಜೂರು ಗ್ರಾಮದ ಶ್ರೀ ವಿರಾಂಜನೇಯ ದೇವಸ್ಥಾನಕ್ಕೆ ಕಳೆದ 18 ವರ್ಷಗಳಿಂದ ಪ್ರವೇಶಕ್ಕೆ ಯಾವ ನಿರ್ಬಂಧ ಇರುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ದೇವಾಲಯದ ಪ್ರವೇಶವನ್ನು ನಿರ್ಬಂಧಿಸಿದಲ್ಲದೇ ಮುಂಭಾಗದಲ್ಲಿ ತೆಂಗಿನಕಾಯಿ ಒಡೆಯಲು ಅವಕಾಶ ನೀಡಿರುವುದಿಲ್ಲ ಎಂದು ಆರೋಪಿಸಿದರು.

ವಿವಿಧ ದಲಿತ ಸಂಘಟನೆಯ ಮುಖಂಡರಿಂದ ಪ್ರತಿಭಟನೆ

​ತೇಜೂರು ಗ್ರಾಮದಲ್ಲಿರುವ ವರ್ಗದ ಗ್ರಾಮಸ್ಥರು ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್​ರವರ ಕಿರುಚಿತ್ರದ ಭಿತ್ತಿ ಚಿತ್ರವನ್ನು ಶುಭ ಕೋರಲು ಅಂಬೇಡ್ಕರ್ ಭವನದ ತೇಜೂರಿನಲ್ಲಿ ಹಾಕಲು ಹೋದಾಗ ಹಿಂದುಳಿದ ವರ್ಗದವರಿಗೆ ಸವರ್ಣಿಯರು ಅವಾಚ್ಯ ಪದಗಳಿಂದ ನಿಂದಿಸಿದಲ್ಲದೇ ಕಲ್ಲು, ದೊಣ್ಣೆ ಹಾಗೂ ಕೆಲವು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿ ಬ್ಯಾನರ್ ಹಾಕಲು ಅವಕಾಶ ನೀಡಿರುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ದೂರಿದರು.

ಕೂಡಲೇ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಮಹಾನಾಯಕರ ಬ್ಯಾನರ್ ಮತ್ತು ದೇವಸ್ಥಾನದ ಪ್ರವೇಶಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

ABOUT THE AUTHOR

...view details